ಗೋಣಿಕೊಪ್ಪ ವರದಿ, ಸೆ. ೨೬: ರಾಷ್ಟಿçÃಯ ಸೇವಾ ಯೋಜನೆ ನೋವಿಗೆ ಸ್ಪಂದಿಸುವ ಗುಣ ಕಲಿಸಿದೆ ಎಂದು ಪುನಶ್ಚೇತನ ಚಾರಿಟೇಬಲ್ ಟ್ರಸ್ಟ್ ಸ್ಥಾಪಕ ಅಧ್ಯಕ್ಷೆ ಬಾಳೆಯಡ ದಿವ್ಯ ಮಂದಪ್ಪ ಹೇಳಿದರು.

ಗೋಣಿಕೊಪ್ಪ ಕಾವೇರಿ ಕಾಲೇಜು ಎನ್‌ಎಸ್‌ಎಸ್ ಘಟಕ, ಆಂತರಿಕ ಗುಣಮಟ್ಟ ಭರವಸೆ ಘಟಕ ಸಹಯೋಗದಲ್ಲಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಎನ್‌ಎಸ್‌ಎಸ್ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಶಿಬಿರ, ಸಾರ್ವಜನಿಕ ಸೇವೆ, ನೊಂದವರ ಬದುಕಿನ ಚಿತ್ರಣ ಶಿಬಿರದಲ್ಲಿ ಕಂಡು ನೊಂದಿದ್ದೆ. ಇದರಿಂದ ಅಂಗವಿಕಲ ಮಕ್ಕಳಿಗೆ ಆಶ್ರಯ ಕಲ್ಪಿಸಲು ಟ್ರಸ್ಟ್ ಸ್ಥಾಪಿಸಲಾಗಿದೆ. ಇದರಿಂದ ಹೆಚ್ಚು ಪ್ರಯೋಜನವಾಗುತ್ತಿದೆ. ಎನ್‌ಎಸ್‌ಎಸ್ ಸೇವಕರು ಗೌರವದಿಂದ ಯೋಜನೆಯಲ್ಲಿ ತೊಡಗಿಕೊಳ್ಳಬೇಕು ಎಂದರು.

ಸೇವಕ ಪ್ರತಾಪ್, ಮತ್ರಂಡ ದೇಚಮ್ಮ ಎನ್‌ಎಸ್‌ಎಸ್ ಯೋಜನೆಯ ಅತೀ ಉತ್ತಮ ನಾಯಕ ಪ್ರಶಸ್ತಿ ಸ್ವೀಕರಿಸಿದರು. ಘಟಕದಲ್ಲಿರುವ ೧೦ ಗುಂಪುಗಳ ಉತ್ತಮ ನಾಯಕ ಬಹುಮಾನವನ್ನು ದೀಪಿಕ, ರಂಜಿತ್, ಶಭರೀಶ್ ಪಡೆದುಕೊಂಡರು. ಕಾವೇರಿ ಕಾಲೇಜು ಆಂತರಿಕ ಗುಣಮಟ್ಟ ಭರವಸೆ ಘಟಕ ಸಂಚಾಲಕಿ ಎಂ.ಎಸ್. ಭಾರತಿ, ಎನ್‌ಎಸ್‌ಎಸ್ ಯೋಜನಾಧಿಕಾರಿ ಮಂದೇಯAಡ ವನೀತ್‌ಕುಮಾರ್, ಎನ್.ಪಿ. ರೀತಾ ಇದ್ದರು.