ಮಡಿಕೇರಿ, ಸೆ. ೧೪: ಸರಕಾರದ ಸುತ್ತೋಲೆಯಂತೆ ಜಮ್ಮಾ ಮಲೆ ಹೊಂದಿರುವವರು ತಮ್ಮ ಜಮೀನಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೋರಾಟವನ್ನು ಪ್ರಬಲಗೊಳಿಸಲು ಕಕ್ಕಬ್ಬೆಯಲ್ಲಿ ನಡೆದ ಕೊಡಗು ಜಮ್ಮಾ ಮಲೆ ಹಿಡುವಳಿದಾರರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಕಕ್ಕಬ್ಬೆಯ ವ್ಯವಸಾಯ ಸೇವಾ ಸಹಕಾರ ಸಂಘದ ಸಭಾಂಗಣದಲ್ಲಿ ಜಮ್ಮಾ ಮಲೆ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ಕಲಿಯಂಡ ಸಿ. ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿತ್ತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೊಡಗು ಜಮ್ಮಾ ಮಲೆ ಅಸೋಸಿಯೇಷನ್‌ನ ಗೌರವ ಕಾರ್ಯದರ್ಶಿ ಉದಿಯಂಡ ಮೋಹನ್ ಪೆಮ್ಮಯ್ಯ ಅವರು ಕೇಂದ್ರೀಯ ಅಧಿಕಾರಸ್ಥ ಸಮಿತಿ (ಸಿಇಸಿ) ಪ್ರಾಕೃತಿಕ ಕಾಯ್ದಿಟ್ಟ ಅರಣ್ಯ ಮತ್ತು ರಕ್ಷಿತಾರಣ್ಯಗಳ ಮಧ್ಯದಲ್ಲಿರುವ ಮತ್ತು ಅಕ್ಕ ಪಕ್ಕದಲ್ಲಿರುವ ಜಮೀನನ್ನು ಸರಕಾರದ ವಶಕ್ಕೆ ಪಡೆದು ಅರಣ್ಯದ ವ್ಯಾಪ್ತಿಗೆ ಸೇರಿಸುವಂತೆ ಶಿಫಾರಸು ಮಾಡಿರುವುದರ ಬಗ್ಗೆ ಮಾಹಿತಿ ನೀಡಿದರು. ಇದರ ಅನ್ವಯ ಕರ್ನಾಟಕ ಸರ್ಕಾರ ಸುತ್ತೋಲೆ ಯನ್ನು ಕೂಡಾ ಹೊರಡಿಸಿದ್ದು, ರಾಜ್ಯ ಮಟ್ಟ ಮತ್ತು ಜಿಲ್ಲಾ ಮಟ್ಟದ ಉಪ ಸಮಿತಿಯನ್ನು ರಚಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಈ ರೀತಿಯ ಪ್ರಕರಣವನ್ನು ಗುರುತಿಸಿ ಸೂಕ್ತ ಪರಿಹಾರ ಧನ ನೀಡಿ ಸರಕಾರದ ಗೌರವ ಕಾರ್ಯದರ್ಶಿ ಉದಿಯಂಡ ಮೋಹನ್ ಪೆಮ್ಮಯ್ಯ ಅವರು ಕೇಂದ್ರೀಯ ಅಧಿಕಾರಸ್ಥ ಸಮಿತಿ (ಸಿಇಸಿ) ಪ್ರಾಕೃತಿಕ ಕಾಯ್ದಿಟ್ಟ ಅರಣ್ಯ ಮತ್ತು ರಕ್ಷಿತಾರಣ್ಯಗಳ ಮಧ್ಯದಲ್ಲಿರುವ ಮತ್ತು ಅಕ್ಕ ಪಕ್ಕದಲ್ಲಿರುವ ಜಮೀನನ್ನು ಸರಕಾರದ ವಶಕ್ಕೆ ಪಡೆದು ಅರಣ್ಯದ ವ್ಯಾಪ್ತಿಗೆ ಸೇರಿಸುವಂತೆ ಶಿಫಾರಸು ಮಾಡಿರುವುದರ ಬಗ್ಗೆ ಮಾಹಿತಿ ನೀಡಿದರು. ಇದರ ಅನ್ವಯ ಕರ್ನಾಟಕ ಸರ್ಕಾರ ಸುತ್ತೋಲೆ ಯನ್ನು ಕೂಡಾ ಹೊರಡಿಸಿದ್ದು, ರಾಜ್ಯ ಮಟ್ಟ ಮತ್ತು ಜಿಲ್ಲಾ ಮಟ್ಟದ ಉಪ ಸಮಿತಿಯನ್ನು ರಚಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಈ ರೀತಿಯ ಪ್ರಕರಣವನ್ನು ಗುರುತಿಸಿ ಸೂಕ್ತ ಪರಿಹಾರ ಧನ ನೀಡಿ ಸರಕಾರದ ವಶಕ್ಕೆ ಪಡೆಯಲು ಸೂಚನೆ ನೀಡಿರುವುದರ ಬಗ್ಗೆ ಸಭೆಯಲ್ಲಿ ಜಮ್ಮಾಮಾಲೆ ಹಿಡುವಳಿದಾರರ ಗಮನಕ್ಕೆ ತಂದರು.

ಈ ಬಗ್ಗೆ ಸುದೀರ್ಘ ಚರ್ಚೆ ನಡೆದು ಈ ಆದೇಶದ ಮೇರೆಗೆ ಈಗಾಗಲೇ ಅರಣ್ಯ ವ್ಯಾಪ್ತಿಗೆ ಸಮೀಪವಿರುವ ಕೆಲ ಖಾಸಗಿ ಹಿಡುವಳಿದಾರರು ಸರಕಾರದ ಸಮಿತಿಗೆ ಪರಿಹಾರ ಧನ ಕೋರಿ ಅರ್ಜಿ ಸಲ್ಲಿಸಿರುವುದರ ಬಗ್ಗೆಯೂ ಚರ್ಚಿಸಲಾಯಿತು. ಜಮ್ಮಾ ಮಲೆ ಹಿಡುವಳಿದಾರರು ಕೂಡಾ ಈ ಪರಿಹಾರಕ್ಕೆ ಅರ್ಹರಾಗಿದ್ದು, ಎಲ್ಲಾ ಭೂ ಹಿಡುವಳಿದಾರರು ಸಮಿತಿಗೆ ಅರ್ಜಿ ಸಲ್ಲಿಸಲು ತೀರ್ಮಾನಿಸಲಾಯಿತು.

ಈ ಸಂದರ್ಭ ಮಾತನಾಡಿದ ಕೊಡಗು ಏಕೀಕರಣ ರಂಗ ಮತ್ತು ವೈಲ್ಡ್ ಲೈಫ್ ಫಸ್ಟ್ನ ಪ್ರಮುಖ ಎ.ಎ. ತಮ್ಮು ಪೂವಯ್ಯ, ಜಮ್ಮಾ ಮಲೆ ಹಿಡುವಳಿದಾರರು ಹಲವಾರು ದಶಕಗಳಿಂದ ಕ್ಯಾಂಪ್ ಫಂಡಿನ ಮುಖಾಂತರ ತಮ್ಮ ಜಮೀನಿಗೆ ಸೂಕ್ತ ಪರಿಹಾರ ಪಡೆದು ಅರಣ್ಯ ಇಲಾಖೆಗೆ ಜಮೀನನ್ನು ಒಪ್ಪಿಸಲು ಸಿದ್ಧರಿದ್ದರೂ ಕೂಡಾ ಈಗ (ಮೊದಲ ಪುಟದಿಂದ) ಆದ್ಯತೆಯಲ್ಲಿ ಅವರ ಬೇಡಿಕೆಯನ್ನು ಪರಿಗಣಿಸುತ್ತಿಲ್ಲ. ಇತರರಿಗೆ ಆದ್ಯತೆ ನೀಡಿರುವ ಬಗ್ಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದರು. ನಾಪೋಕ್ಲು ಕೊಡವ ಸಮಾಜದ ಸ್ಪೋರ್ಟ್ಸ್ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್‌ನ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಮಾತನಾಡಿ, ಜಮ್ಮಾ ಮಲೆ ಹಿಡುವಳಿದಾರರ ಬೇಡಿಕೆಯ ಪರಿಹಾರಕ್ಕೆ ಒತ್ತು ಕೊಟ್ಟು ಮುಂದಿನ ಕ್ರಮಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಲು ಸಿದ್ದರಿರುವದಾಗಿ ಹೇಳಿದರು. ಕೊಡಗು ಜಮ್ಮಾ ಮಲೆ ಅಸೋಸಿಯೇಷನ್‌ಗೆ ಅವಶ್ಯಕತೆ ಇದ್ದಲ್ಲಿ ಕೊಡಗು ಏಕೀಕರಣ ರಂಗ ವೈಲ್ಡ್ ಲೈಫ್ ಫಸ್ಟ್ ಮತ್ತು ನಾಪೋಕ್ಲು ಕೊಡವ ಸಮಾಜದ ಸ್ಪೋರ್ಟ್ಸ್, ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್‌ನ ಸಲಹೆ ಸಹಕಾರಗಳನ್ನು ಪಡೆದುಕೊಂಡು ತಮ್ಮ ಜಮೀನಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಹೋರಾಟವನ್ನು ಪ್ರಬಲಗೊಳಿಸಲು ಸಭೆಯಲ್ಲಿ ಸರ್ವ ಸಮ್ಮತದಿಂದ ತೀರ್ಮಾನಿಸಲಾಯಿತು.

ಸಭೆಯಲ್ಲಿ ಅಪ್ಪುಮಣಿಯಂಡ ಸನ್ನು ಸೋಮಣ್ಣ, ಪೇರಿಯಂಡ ಪೂವಯ್ಯ, ಪೊನ್ನೋಲತಂಡ ಚಿಣ್ಣಪ್ಪ, ಕಕ್ಕಬೆ ಗ್ರಾಮ ಪಂಚಾಯತ್‌ನ ಅಧ್ಯಕ್ಷ ಕಲಿಯಂಡ ಸಂಪನ್, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ ಮತ್ತು ಜಮ್ಮಾಮಲೆ ಹಿಡುವಳಿದಾರರ ೬೫ ಕುಟುಂಬದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.