ಗೋಣಿಕೊಪ್ಪ ವರದಿ, ಸೆ. ೧೪: ಕೃಷಿ ಉತ್ಪನ್ನಕ್ಕೆ ಲಾಭದಾಯಕ ಬೆಲೆ ಘೋಷಿಸುವಂತೆ ಕೊಡಗು ಜಿಲ್ಲಾ ಭಾರತೀಯ ಕಿಸಾನ್ ಸಂಘದ ವತಿಯಿಂದ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಮನವಿ ಸಲ್ಲಿಸಿ ಒತ್ತಾಯಿಸಿತು.

ಕೊಡಗು ಜಿಲ್ಲಾ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಮುಖ್ ಮುಕ್ಕಾಟೀರ ಪ್ರವೀಣ್ ಭೀಮಯ್ಯ ಮನವಿ ಸಲ್ಲಿಸಿ, ಆಹಾರ ಉತ್ಪಾದಿಸುವ ಕೃಷಿ ಕ್ಷೇತ್ರ ದುಸ್ಥಿತಿಯಲ್ಲಿದ್ದು, ಸರ್ಕಾರದಿಂದ ಸೂಕ್ತ ಪ್ರೋತ್ಸಾಹವಿಲ್ಲದೆ, ಕೃಷಿಯಿಂದ ದೂರ ಉಳಿಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬೇರೆ ಕ್ಷೇತ್ರಗಳಲ್ಲಿ ಉತ್ಪಾದಕರೆ ದರ ನಿಗದಿ ಮಾಡುವುದರಿಂದ ಅಭಿವೃದ್ಧಿ ಸಾಧಿಸುತ್ತಿದೆ. ಕೃಷಿ ಉತ್ಪನ್ನಕ್ಕೆ ಬೇರೆ ಯಾರೋ ದರ ನಿಗದಿ ಪಡಿಸುವುದರಿಂದ ರೈತ ನಷ್ಟದ ಹಾದಿಯಲ್ಲಿದ್ದಾನೆ. ಕನಿಷ್ಟ ಬೆಂಬಲ ಬೆಲೆಯೊಂದಿಗೆ ಉತ್ಪಾದನಾ ವೆಚ್ಚ ಪರಿಗಣಿಸಿ ಲಾಭದಾಯಕ ಬೆಲೆ ನಿಗದಿಗೆ ಅವಕಾಶ ಮಾಡಿಕೊಡಬೇಕು ಎಂದು ತಿಳಿಸಿಕೊಟ್ಟರು. ಪದಾಧಿಕಾರಿ ರತೀಶ್, ಕೊಟ್ಟಂಗಡ ಅಯ್ಯಪ್ಪ, ರಾಜಾ ನಂಜಪ್ಪ, ಸುಬ್ರಮಣಿ ಇದ್ದರು.