ಮಡಿಕೇರಿ, ಸೆ. ೧೪: ಮಡಿಕೇರಿ ಹೊರವಲಯದ ಕೂಟುಹೊಳೆ ಬಳಿ ನೆನೆಗುದಿಗೆ ಬಿದ್ದಿರುವ ಅಬಕಾರಿ ಭವನ ಕಾಮಗಾರಿಗೆ ಅನುದಾನ ಲಭ್ಯತೆ ಆದರಿಸಿ ಪೂರ್ಣಗೊಳಿಸಲಾಗುವುದು ಎಂದು ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪ್ರಶ್ನೆಗೆ ಅಬಕಾರಿ ಸಚಿವ ಕೆ. ಗೋಪಾಲಯ್ಯ ಉತ್ತರಿಸಿದರು.

೨೦೦೬-೦೭ರಲ್ಲಿ ಲೋಕೋಪಯೋಗಿ ಇಲಾಖೆ ತಯಾರಿಸಿದ ಅಂದಾಜು ಪಟ್ಟಿಯಂತೆ ರೂ. ೨ ಕೋಟಿಗಳ ಪೈಕಿ ರೂ. ೭೦ ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಬಿಡುಗಡೆಯಾದ ಅನುದಾನದಲ್ಲಿ ಅಬಕಾರಿ ಭವನ ನಿರ್ಮಾಣ ಕಾರ್ಯ ಪ್ರಾರಂಭಿಸಿ ನೆಲಮಹಡಿ ನಿರ್ಮಾಣ ಪೂರ್ಣಗೊಂಡಿದೆ. ೨೦೧೮-೧೯ರಲ್ಲಿ ಅಂದಾಜು ಪಟ್ಟಿಯಂತೆ ರೂ. ೪.೯೫ ಕೋಟಿ ಮೊದಲ ಮತ್ತು ೨ನೇ ಮಹಡಿ ನಿರ್ಮಾಣಕ್ಕೆ ಅಗತ್ಯವಿದೆ ಎಂದು ವಿವರ ನೀಡಿದ್ದಾರೆ.

ತಾ.೧ರಂದು ಅಬಕಾರಿ ಭವನ ನೆನೆಗುದಿಗೆ ಬಿದ್ದಿರುವ ಬಗ್ಗೆ ‘ಶಕ್ತಿ’ಯಲ್ಲಿ ವರದಿ ಪ್ರಕಟಗೊಂಡಿತ್ತು.