ಮಡಿಕೇರಿ, ಸೆ. ೧೪: ಕೊಡಗು ಜಿಲ್ಲೆಯಲ್ಲಿ ‘ಹೆಲಿ ಟೂರಿಸಂ’ ಆರಂಭಕ್ಕೆ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಮೇಲ್ಮನೆಯಲ್ಲಿ ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಪ್ರಶ್ನೆಗೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಉತ್ತರಿಸಿದರು.

ಕರ್ನಾಟಕದಲ್ಲಿ ಪ್ರವಾಸೋದ್ಯಮ ಇಲಾಖೆಯು ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬAಧಿಸಿದ ಪ್ರಮುಖ ಇಲಾಖೆಯಾಗಿದ್ದು, ರಾಷ್ಟಿçÃಯ ಮತ್ತು ಅಂರ‍್ರಾಷ್ಟಿçÃಯ ಮಟ್ಟದಲ್ಲಿನ ಪ್ರವಾಸಿಗರನ್ನು ಕರ್ನಾಟಕದತ್ತ ಸೆಳೆಯಲು ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿ ‘ಹೆಲಿ ಟೂರಿಸಂ’ ಅನ್ನು ಅನುಷ್ಠಾನಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ಅನುಕೂಲವಾಗು ವಂತೆ ಕರಡು ‘ಹೆಲಿ ಟೂರಿಸಂ ಸರ್ಕ್ಯೂಟ್’ ನಲ್ಲಿ ಕೊಡಗು ಜಿಲ್ಲೆಯನ್ನು ಸಹ ಸೇರ್ಪಡೆಗೊಳಿಸಲು ಪ್ರಸ್ತಾವನೆ ಇದ್ದು, ಸಮಾಲೋಚಕ ಸೇವೆಯನ್ನು ಪಡೆಯಲು ನಿರ್ವಾಹಕರನ್ನು ಆಯ್ಕೆ ಮಾಡುವ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿರುತ್ತದೆ ಎಂದು ಸಚಿವರು ಅಧಿವೇಶನದಲ್ಲಿ ಮಾಹಿತಿ ನೀಡಿದ್ದಾರೆ.

ಉದ್ದೇಶಿತ ಯೋಜನೆಗೆ ಎಷ್ಟು ಪ್ರವಾಸಿ ತಾಣಗಳನ್ನು ಪರಿಗಣಿಸಲಾಗಿದೆ. ಪ್ರವಾಸಿ ತಾಣಗಳ ಅಭಿವೃದ್ಧಿಗೆ ನೀಡಿರುವ ಅನುದಾನದ ವಿವರವನ್ನು ವೀಣಾ ಕೋರಿದಾಗ, ಯೋಜನೆ ಪ್ರಾರಂಭಿಕ ಹಂತದಲ್ಲಿದೆ ಎಂಬ ಉತ್ತರವನ್ನು ಆನಂದ್ ಸಿಂಗ್ ನೀಡಿದ್ದಾರೆ.