ವೀರಾಜಪೇಟೆ, ಏ. ೧೨: ಪ್ರವಾದಿ ಮುಹಮ್ಮದ್(ಸ)ರ ಬಗ್ಗೆ ಉರ್ದು ಭಾಷೆಯಲ್ಲಿರುವ ಕವನಗಳ ಸಂಗ್ರಹ ‘ರೂಹ್-ಎ-ಆವಾಝ್’ನ ಬಿಡುಗಡೆ ಕಾರ್ಯಕ್ರಮ ವೀರಾಜಪೇಟೆಯ ಅಪ್ಪಯ್ಯಸ್ವಾಮಿ ರಸ್ತೆಯಲ್ಲಿರುವ ಜಾಮಿಯಾ ಮಸೀದಿಯಲ್ಲಿ ನಡೆಯಿತು. ಖಿರಾಅತ್‌ನೊಂದಿಗೆ ಪ್ರಾರಂಭಗೊAಡ ಕಾರ್ಯಕ್ರಮದಲ್ಲಿ ಸ್ಥಳೀಯ ಮಸ್ಜಿದ್-ಎ-ಅಝಂ’ನ ಧರ್ಮಗುರುಗಳಾದ ಪೇಶ್ ಇಮಾಮ್ ಮುಹಮ್ಮದ್ ರಶಾದಿಯವರು ವಹಿಸಿದ್ದರು. ಜಾಮಿಯಾ ಮಸೀದಿ ಅಧ್ಯಕ್ಷ ನಿಯಾಝ್ ಅಹಮದ್, ಕಾರ್ಯದರ್ಶಿ ಸನಾವುಲ್ಲಾ, ಕಬೀರ್ ಅಹಮದ್, ಮನ್ಸೂರ್ ಅಹಮದ್, ಮಸ್ಜಿದ್-ಎ-ಅಝಂ ಆಡಳಿತ ಸಮಿತಿಯ ಕಾರ್ಯದರ್ಶಿ ಎಸ್.ವೈ. ಮುನವ್ವರ್ ಅಹಮದ್, ಸದಸ್ಯ ಅಸ್ಗರ್ ಹುಸೈನ್, ಮುಹಮ್ಮದ್ ಝಫರ್, ಮುನವರ್ ಹುಸೈನ್, ಇಮಾಮ್ ಮುಹಮ್ಮದ್ ರಶಾದಿಯವರು ವಹಿಸಿದ್ದರು. ಜಾಮಿಯಾ ಮಸೀದಿ ಅಧ್ಯಕ್ಷ ನಿಯಾಝ್ ಅಹಮದ್, ಕಾರ್ಯದರ್ಶಿ ಸನಾವುಲ್ಲಾ, ಕಬೀರ್ ಅಹಮದ್, ಮನ್ಸೂರ್ ಅಹಮದ್, ಮಸ್ಜಿದ್-ಎ-ಅಝಂ ಆಡಳಿತ ಸಮಿತಿಯ ಕಾರ್ಯದರ್ಶಿ ಎಸ್.ವೈ. ಮುನವ್ವರ್ ಅಹಮದ್, ಸದಸ್ಯ ಅಸ್ಗರ್ ಹುಸೈನ್, ಮುಹಮ್ಮದ್ ಝಫರ್, ಮುನವರ್ ಹುಸೈನ್, ಮದೀನಾ ಮಸೀದಿಯ ಫಹೀಮುದ್ದೀನ್, ಮದೀನಾ ಶಿಕ್ಷಣ ಸಂಸ್ಥೆಯ ಎಸ್.ಹೆಚ್. ಮೊಯಿನುದ್ದೀನ್ ಕಾರ್ಯ ಕ್ರಮವನ್ನುದ್ದೇಶಿಸಿ ಮಾತನಾಡಿದರು. ಮದೀನಾ ಸಮೀದಿ ಇಮಾಮ್ ಮೌ. ಮುಝಮ್ಮಿಲ್ ಕಾರ್ಯಕ್ರಮ ನಿರೂಪಿಸಿದರು. ಜಾಮಿಯಾ ಮಸೀದಿಯ ಪೇಶ್ ಇಮಾಮ್ ಗುಲ್‌ಷದ್ ಖಾಸಿಮಿ ಕವನಗಳ ಸಂಗ್ರಹವನ್ನು ರಚಿಸಿದ್ದಾರೆ.