ಮಡಿಕೇರಿ, ಡಿ. 7: ಮಡಿಕೇರಿಯ ‘ಸ್ಪಾರ್ಟನ್ಸ್ ಬಾಸ್ಕೆಟ್‍ಬಾಲ್ ಕ್ಲಬ್’ ವತಿಯಿಂದ ತಾ. 30 ಹಾಗೂ 31 ರಂದು ಬಾಸ್ಕೆಟ್‍ಬಾಲ್ ಟೂರ್ನಿ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಹಿಳೆಯರಿಗೆ, ಪುರುಷರಿಗೆ ಹಾಗೂ 18 ವರ್ಷ ವಯೋಮಿತಿ ಕೆಳಗಿನ ಹುಡುಗರಿಗೆ ಒಟ್ಟು 3 ವಿಭಾಗಗಳಲ್ಲಿ ಪಂದ್ಯಾಟ ನಡೆಯಲಿದೆ. ನಗರದ ಮ್ಯಾನ್ಸ್ ಕಾಂಪೌಂಡ್‍ನ ಬಾಸ್ಕೆಟ್‍ಬಾಲ್ ಕ್ರೀಡಾಂಗಣದಲ್ಲಿ ಪಂದ್ಯಾಟ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ಮೊ. 9483531998, 7760740031 ಅಥವಾ ಇ-ಮೇಲ್ :sಠಿಚಿಡಿಣಚಿಟಿsmeಡಿಛಿeಡಿಚಿ@gmಚಿiಟ.ಛಿom ಅನ್ನು ಸಂಪರ್ಕಿಸಬಹುದು.