ವೀರಾಜಪೇಟೆ, ಡಿ. 4: ವೀರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ಒಟ್ಟು ರೂ 60,49,776.30 ಲಾಭಗಳಿಸಿದ್ದು ಈ ಪೈಕಿ ಆದಾಯ ತೆರಿಗೆ ರೂ 19,000,000 ಕಳೆದು ರೂ 41,49,996.30 ನಿವ್ವಳ ಲಾಭ ಹೊಂದಿದ್ದು ಶೇ. 86.28 ಸಾಲ ವಸೂಲಾತಿಯಾಗಿದ್ದು, ಲೆಕ್ಕ ಪರಿಶೋಧನೆಯಲ್ಲಿ "ಎ" ವರ್ಗ ನೀಡಲಾಗಿದೆ ಎಂದು ಬ್ಯಾಂಕ್‍ನ ಆಡಳಿತ ಮಂಡಳಿ ಅಧ್ಯಕ್ಷ ಕರ್ನಂಡ ಎಂ. ರಘು ಸೋಮಯ್ಯ ತಿಳಿಸಿದ್ದಾರೆ.

ವೀರಾಜಪೇಟೆ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸೋಮಯ್ಯ, ಬ್ಯಾಂಕ್‍ನಲ್ಲಿ ಒಟ್ಟು 4276 ಸದಸ್ಯರುಗಳಿದ್ದು, 1.99,05,830 ಪಾಲು ಬಂಡವಾಳವನ್ನು ಹೊಂದಿದೆ. ವರದಿ ಸಾಲಿನಲ್ಲಿ ರೂ. 21,10,81,500 ಸಾಲವನ್ನು ವಿತರಿಸಿ ರೂ. 18,52,78,189 ಸಾಲ ವಸೂಲಿ ಮಾಡಲಾಗಿದೆ. ಬ್ಯಾಂಕ್‍ನ ಠೇವಣಾತಿಯು ರೂ. 45,75,50, 678 ಇರುತ್ತದೆ. ಗಿರ್ವಿ ಸಾಲ, ಮನೆ ನಿರ್ಮಾಣ ಸಾಲಗಳಿಗೆ ಬ್ಯಾಂಕ್‍ನ ಆಡಳಿತ ಮಂಡಳಿ ಆದ್ಯತೆ ನೀಡಿದ್ದು ಸದಸ್ಯರುಗಳಿಗೆ ಜಾಮೀನು ಸಾಲವನ್ನು ನಿಗದಿತ ಸಮಯದಲ್ಲಿ ವಿತರಿಸಲಾಗುತ್ತಿದೆ ಎಂದರು.

ಉಪಾಧ್ಯಕ್ಷ ಕೆ.ಎಂ. ಚರ್ಮಣ್ಣ ಮಾತನಾಡಿ, ಬ್ಯಾಂಕ್‍ನ ಸರ್ವ ಸದಸ್ಯರುಗಳ ಮಹಾಸಭೆಯು ತಾ. 5 ರಂದು ವೀರಾಜಪೇಟೆ ಮಹಿಳಾ ಸಮಾಜದಲ್ಲಿ ನಡೆಯಲಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ನಿರ್ದೇಶಕರುಗಳಾದ ಕೆ.ಡಬ್ಲ್ಯೂ. ಬೋಪಯ್ಯ, ಎಂ.ಎಂ. ನಂಜಪ್ಪ, ಕೆ.ಬಿ. ಪ್ರತಾಪ್, ಪಿ.ಎಂ. ರಚನ್, ಎಂ.ಪಿ. ಕಾವೇರಪ್ಪ, ಎಂ.ಎನ್. ಪೂಣಚ್ಚ, ವಿ.ಪಿ. ರಮೇಶ್, ಎಂ.ಕೆ. ದೇವಯ್ಯ, ಡಿ.ಎಂ. ರಾಜ್‍ಕುಮಾರ್, ಪಿ.ಕೆ. ಅಬ್ದುಲ್ ರೆಹಮಾನ್, ಹೆಚ್.ಸಿ. ಮುತ್ತಮ್ಮ, ಎಸ್.ಪಿ. ಜುಬಿನ, ಐ.ಎಂ. ಕಾವೇರಮ್ಮ ಹಾಗೂ ವ್ಯವಸ್ಥಾಪಕ ಸಿ.ಎಸ್. ಪ್ರಕಾಶ್ ಹಾಜರಿದ್ದರು.