ಮಡಿಕೇರಿ, ನ. 5: ಕೊಡವ ‘ಟ್ಯಾಲೆಂಟ್ ಶೋ’ ಎಂಬ ಕಾರ್ಯ ಕ್ರಮವನ್ನು ಆಯೋಜಿಸುತ್ತಿರುವ ಕೊಡವ ಕೂಟಕಾರ ಸಂಘಟನೆ ವತಿಯಿಂದ ಪ್ರಸ್ತುತ ಮರೆಯಾಗುತ್ತಿ ರುವ ಈ ಹಿಂದೆ ಬಳಕೆಯಲ್ಲಿದ್ದ ಪಾನಿ ಮಂಡೆತುಣಿ ಕಟ್ಟುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಇದರಲ್ಲಿ ಭಾಗವಹಿಸುವವರು ಪಾನಿ ಮಂಡೆತುಣಿ ಬಟ್ಟೆ ಬಳಸಿಯೇ ಇದನ್ನು ಕಟ್ಟಬೇಕು. ಕಡಿಮೆ ಅವಧಿಯಲ್ಲಿ ಇದನ್ನು ವೀಡಿಯೋ ಚಿತ್ರೀಕರಣ ಮಾಡಿ 9743032337 ವ್ಯಾಟ್ಸಾಪ್ ಸಂಖ್ಯೆಗೆ ಕಳುಹಿಸಬಹುದಾಗಿದೆ.
ಜನಾಂಗದ ಪುರುಷರು, ಮಹಿಳೆಯರು, ಯುವಕ, ಯುವತಿ ಯರು ಇದರಲ್ಲಿ ಪಾಲ್ಗೊಳ್ಳಬಹುದಾ ಗಿದ್ದು, ತಾ. 25 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರೊಳಗೆ ವೀಡಿಯೋ ವನ್ನು ಕಳುಹಿಸಬೇಕು. ಕಂಬೆಯಂಡ ಪುಷ್ಪ ದೇವಯ್ಯ ಅವರು ಇದಕ್ಕೆ ವಿಶೇಷ ಬಹುಮಾನ ಪ್ರಾಯೋಜಿಸಿ ದ್ದಾರೆ. ಹೆಚ್ಚಿನ ವಿವರಕ್ಕೆ ಸಂಚಾಲಕಿ ಮಿದೇರಿರ ಟಾಯ್ಸಿ ದೇಚಮ್ಮ ಅವರನ್ನು ಸಂಪರ್ಕಿಸಬಹುದಾಗಿದೆ.