ಮಡಿಕೇರಿ, ನ. 2: ಇಲ್ಲಿನ ಜಿಲ್ಲಾ ಸರಕಾರಿ ಆಸ್ಪತ್ರೆಯ ಹಳೆಯ ವಸತಿ ಗಳನ್ನು ತೆರವುಗೊಳಿಸಿ, ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ನೂತನ ಕಟ್ಟಡ ಕಾಮಗಾರಿಯನ್ನು ನಿಯಮಾನುಸಾರ ಕೈಗೊಳ್ಳುವಂತೆ ‘ಮೂಡಾ’ ಅಧ್ಯಕ್ಷ ಕೆ.ಎಸ್. ರಮೇಶ್ ಹೊಳ್ಳ ಸಂಸ್ಥೆಯ ಮುಖ್ಯಸ್ಥರಿಗೆ ಸಲಹೆ ನೀಡಿದ್ದಾರೆ. ಜಿಲ್ಲಾ ಆಸ್ಪತ್ರೆ ಕೆಳಭಾಗದ ಜಲಾಶ್ರಯ ಬಡಾವಣೆಗೆ ತೆರಳುವ ರಸ್ತೆ ಬದಿ ನಿಯಮ ಬಾಹಿರವಾಗಿ ಕಾಮಗಾರಿ ನಡೆಯುತ್ತಿದೆ ಎಂದು ಕೆಲಮಂದಿ ದೂರು ನೀಡಿದ್ದರು. ಸಾರ್ವಜನಿಕ ದೂರಿನ ಮೇರೆಗೆ ಕಾಮಗಾರಿ ಸ್ಥಳ ಪರಿಶೀಲನೆ ಮಾಡಿರುವುದಾಗಿ ಕೆ.ಎಸ್. ರಮೇಶ್ ಹೊಳ್ಳ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿ ದರು. ಅಲ್ಲದೆ ಕಟ್ಟಡದ ನಕ್ಷೆ ಹಾಗೂ ಸರಕಾರದಿಂದ ಅನು ಮೋದನೆ ಕುರಿತು ದಾಖಲಾತಿಗಳ ಪ್ರತಿಗಳನ್ನು ಸಲ್ಲಿಸುವಂತೆ ಅವರು ವೈದ್ಯಕೀಯ ಸಂಸ್ಥೆಯ ಮುಖ್ಯಸ್ಥ ಡಾ. ಕಾರ್ಯಪ್ಪ ಅವರಿಗೆ ಗಮನ ಸೆಳೆದರು.ನಿಯಮಾನುಸಾರ ಕೆಲಸ: ಈ ಸಂದರ್ಭ ‘ಶಕ್ತಿ’ಯೊಂದಿಗೆ ಪ್ರತಿ ಕ್ರಿಯಿಸಿದ ಡಾ. ಕಾರ್ಯಪ್ಪ ಅವರು, ಸರಕಾರದ ನಿಯಮದಂತೆ ಈಗಿರುವ ಜಾಗವನ್ನು ಸದ್ಬಳಕೆ ಮಾಡಿ ಕೊಂಡು ಕಾಮಗಾರಿ ಕೈಗೊಳ್ಳ ಲಾಗಿದ್ದು, ‘ಮೂಡಾ’ಗೆ ದಾಖಲಾತಿ ಗಳನ್ನು ಒದಗಿಸುವುದಾಗಿ ನುಡಿದರು.

ಅಲ್ಲದೆ ಈ ಹಿಂದೆ ಇದ್ದ ಕಟ್ಟಡ ಕೆಡವಿ ಆಸ್ಪತ್ರೆಯ ಜಾಗದಲ್ಲೇ ಹಿಂದಿನ ತಡೆಗೋಡೆಗೆ ಹೊಂದಿಕೊಂಡಂತೆ ಕೆಲಸ ಆರಂಭಿಸಿದ್ದು, ಉಪ ಮುಖ್ಯಮಂತ್ರಿಗಳೂ ಆಗಿರುವ ವೈದ್ಯಕೀಯ ಶಿಕ್ಷಣ ಸಚಿವ ಸಿ.ಎಸ್. ಅಶ್ವತ್ಥ್ ನಾರಾಯಣ ಹಾಗೂ ತಂತ್ರಜ್ಞರ ಸಲಹೆ ಮೇರೆಗೆ ಕಾಮಗಾರಿ ನಡೆಯುತ್ತಿದೆ ಎಂದು ಮಾರ್ನುಡಿದರು.