ಸೋಮವಾರಪೇಟೆ, ಅ. 22: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೇ ಸಂಚರಿಸುವ ಮಂದಿಗೆ ಪೊಲೀಸರು ದಂಡ ವಿಧಿಸಿದ ನಂತರ, ದಂಡ ಪಾವತಿಸುವ ಮಂದಿಗೆ ಮಾಸ್ಕ್ ನೀಡಲು ಯುವ ಬ್ರಿಗೇಡ್ ಹಾಗೂ ಕರವೇ ವತಿಯಿಂದ ಪೊಲೀಸ್ ಇಲಾಖೆಗೆ 500 ಮಾಸ್ಕ್‍ಗಳನ್ನು ವಿತರಿಸಲಾಯಿತು.
ಮಾಸ್ಕ್ ಧರಿಸದ ವ್ಯಕ್ತಿಗಳು ಪೊಲೀಸರಿಗೆ ದಂಡ ಪಾವತಿಸಿದ ಮೇಲೆಯೂ ಮಾಸ್ಕ್ ಧರಿಸದೇ ಹಾಗೆಯೇ ಓಡಾಡುತ್ತಿರುತ್ತಾರೆ. ಈ ಬಗ್ಗೆ ವಿಚಾರಿಸಿದರೆ ದಂಡ ಪಾವತಿಸಿದ್ದೇನೆ ಎಂಬ ಜವಾಬ್ದಾರಿ ರಹಿತ ಹೇಳಿಕೆ ನೀಡುತ್ತಾರೆ. ಈ ಹಿನ್ನೆಲೆ ಪೊಲೀಸರು ದಂಡ ಪಾವತಿಸಿದ ಮೇಲೆ ಆ ವ್ಯಕ್ತಿಗಳಿಗೆ ಉಚಿತವಾಗಿ ಮಾಸ್ಕ್ ನೀಡುವ ಮೂಲಕ ಜಾಗೃತಿ ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಇಲಾಖೆಗೆ ಮಾಸ್ಕ್‍ಗಳನ್ನು ಕೊಡುಗೆಯಾಗಿ ನೀಡಲಾಗಿದೆ ಎಂದು ಯುವ ಬ್ರಿಗೇಡ್‍ನ ಕೃಷ್ಣ ತಿಳಿಸಿದರು.
ಇಲ್ಲಿನ ಪೊಲೀಸ್ ಠಾಣೆಯಲ್ಲಿ ಎಎಸ್‍ಐ ಬಸಪ್ಪ್ಪ ಅವರ ಮೂಲಕ, ಯುವ ಬ್ರಿಗೇಡ್‍ನ ಕೃಷ್ಣ, ಕರವೇ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್, ಕಾರ್ಯಕರ್ತರಾದ ರವಿ, ದಿವಾಕರ್, ರಾಘವೇಂದ್ರ ಅವರುಗಳು ಮಾಸ್ಕ್ ಹಸ್ತಾಂತರಿಸಿದರು.