ವೀರಾಜಪೇಟೆ, ಅ. 22: ವೀರಾಜಪೇಟೆ ಕಾವೇರಿ ಕಾಲೇಜು ಉಪನ್ಯಾಸಕಿ ಕುಪ್ಪಂಡ ವೀಣಾ ರವೀಂದ್ರ ಅವರಿಗೆ ಮೈಸೂರು ವಿಶ್ವ ವಿದ್ಯಾ ನಿಲಯದ ಶತಮಾನ ಘಟಿಕೋತ್ಸವ ಭವನದ ವಿಶ್ವ ವಿದ್ಯಾನಿಲಯದ ಕಾರ್ಯಸೌಧದಲ್ಲಿ ನಡೆದ ಸಮಾರಂಭದಲ್ಲಿ ಕುಲಪತಿ ಪ್ರೊ. ಹೇಮಂತಕುಮಾರ್ ಪಿಹೆಚ್‍ಡಿ ಪದವಿ ಪ್ರದಾನ ಮಾಡಿದರು. ಡಾ. ವಿಜಯ ಶೇಷಾದ್ರಿ ಅವರ ಮಾರ್ಗದರ್ಶನದಲ್ಲಿ ಮೇಪಲ್ ಅಂಡ್ ದ ಲೋಟಸ್ ಎ ಕಂಪಾರಿಟಿವ್ ಸ್ಟಡಿ ಆಫ್ ಸೆಲೆಕ್ಟ್ ನೊವೆಲ್ಸ್ ಮಾರ್ಗರೇಟ್ ಎಟ್‍ವುಡ್ ಅಂಡ್ ಕಾವೇರಿ ನಂಬಿಷನ್ ಎಂಬ ವಿಷಯದಲ್ಲಿ ಮಂಡಿಸಿದ ನಿಗದಿತ ಪರೀಕ್ಷೆಯಲ್ಲಿ ಉತ್ತಿರ್ಣರಾಗಿರುವುದರಿಂದ ಡಾಕ್ಟರೇಟ್ ಪದವಿ ನೀಡಲಾಗಿದೆ. ಇವರು ನಾಂಗಾಲ ಗ್ರಾಮದ ವಕೀಲ ಕುಪ್ಪಂಡ ರವೀಂದ್ರ ಅವರ ಪತ್ನಿ.