*ಸಿದ್ದಾಪುರ, ಅ. 22: ಅಭ್ಯತ್‍ಮಂಗಲ ಜ್ಯೋತಿ ನಗರದ ಭಾರತಾಂಭೆ ಯುವಕ ಸಂಘದ ವತಿಯಿಂದ ಒಂಟಿಯಂಗಡಿ ಜಂಕ್ಷನ್‍ನಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು.
ಮಡಿಕೇರಿ, ಸಿದ್ದಾಪುರ, ಕುಶಾಲನಗರಕ್ಕೆ ತೆರಳುವ ರಸ್ತೆಗಳು ಸೇರುವ ಒಂಟಿಯಂಗಡಿ ಜಂಕ್ಷನ್‍ನಲ್ಲಿ ಕಾಡು ಬೆಳೆದು ಅಪಘಾತ ಸಂಭವಿಸುತ್ತಿತ್ತು. ಇದನ್ನು ಮನಗಂಡ ಯುವಕ ಸಂಘದ ಪ್ರಮುಖರು ರಸ್ತೆ ಬದಿ ಬೆಳೆದಿದ್ದ ಗಿಡ, ಗಂಟಿಗಳನ್ನು ಕಡಿದು ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಟ್ಟರು. ತ್ಯಾಜ್ಯ ತುಂಬಿದ್ದ ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡಿದರು.
ಸಂಘದ ಪ್ರಮುಖರಾದ ರತೀಶ್, ಉಣ್ಣಿಕೃಷ್ಣ, ವಿನೋದ್, ಮುರಳಿ, ಪವನ್ ಮತ್ತಿತರರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.