ಕೂಡಿಗೆ, ಆ. 30: ಕೂಡು ಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವನತ್ತೂರು ಗ್ರಾಮದಲ್ಲಿರುವ ಆನೆ ಕೆರೆಯು ಹಿಂದಿನಿಂದಲೂ ಬಹಳ ಪ್ರಸಿದ್ಧವಾದ ಕೆರೆಯಾಗಿದ್ದು,ಅಲ್ಲದೆ ಈ ಕೆರೆಯಿಂದ ನೂರಾರು ಎಕರೆಗಳಷ್ಟ್ಟು ಪ್ರದೇಶದಲ್ಲಿ ರೈತರು ಬೇಸಾಯ ಮಾಡುತ್ತಿದ್ದರೂ ಎಂಬುದಕ್ಕೆ ಅನೇಕ ಪುರಾವೆಗಳು ಇವೆ ಆದರೆ ಈ ಕೆರೆಯ ಕೆಲ ಪ್ರದೇಶವನ್ನು ಅನೇಕರು ಒತ್ತುವರಿ ಮಾಡಿಕೊಂಡ ಪರಿಣಾಮ ಜಲಮೂಲದ ಮಾರ್ಗಗಳು ಮುಚ್ಚಿಕೊಂಡ ಹಿನ್ನೆಲೆಯಲ್ಲಿ ಕೆರೆಯಲ್ಲಿ ನೀರು ಇಲ್ಲಾದಾಗಿದೆ. ಇದರಿಂದಾಗಿ ಪಕ್ಕದಲ್ಲಿಯೇ ಹರಿಯುವ ನದಿಯಿಂದ ನೀರನ್ನು ಕಿರು ನೀರಾವರಿ ಯೋಜನೆ ಯ ಮೂಲಕ. ನೀರನ್ನು ಎತ್ತುವಿಕೆಯ ಮೂಲಕ ಕೆರೆಗೆ ಹರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಆನೆ ಕೆರೆಯು ಬಹಳ ಹಿಂದಿನಿಂದಲೂ ಈ ವ್ಯಾಪ್ತಿಯ ಗ್ರಾಮಗಳಾದ ಚಿಕ್ಕತ್ತೂರು ದೊಡ್ಡತ್ತೂರು ಬಸವನತ್ತೂರು ಕೂಡುಮಂಗಳೂರು ಗ್ರಾಮಗಳ ನೂರಾರು ಎಕರೆ ಪ್ರದೇಶದಲ್ಲಿ ಈ ಭಾಗದ ರೈತರು ವ್ಯವಸಾಯ ಮಾಡಿ ತಮ್ಮ ಬದುಕನ್ನು ಕಟ್ಟಿಕೊಂಡಿದರು ಆದರೆ ಇದೀಗ ಕೆರೆಯಲ್ಲಿ ಮಳೆ ಯಿಂದಾಗಿ ನೀರು ತುಂಬುತ್ತಿತ್ತು. ಆದರೆ ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾದ ಪರಿಣಾಮ, ಜಲಮೂಲ ಇಲ್ಲದೆ ನೀರು ಇಲ್ಲದಾಗಿದೆ.

ಈ ಬಾರಿ ಕೆರೆಯಲ್ಲಿ ನೀರು ತೀರಾ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಜಾನುವಾರುಗಳಿಗೆ ಕುಡಿಯುವ ನೀರು ಇಲ್ಲದಾಗಿದೆ. ಮತ್ತು ಸ್ಥಳೀಯ ಗ್ರಾಮಸ್ಥರ ಉಪಯೋಗಕ್ಕೆ ಇಲ್ಲದಾಗಿದೆ.

ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಗ್ರಾಮ ಸಭೆಗಳಲ್ಲಿ ಅನೇಕ ಬಾರಿ ಚರ್ಚೆಗಳು ನಡೆದು ಐದು ವರ್ಷಗಳೆ ಕಳೆದಿದೆ. ಅಲ್ಲದೆ ಒತ್ತುವರಿ ವಿಷಯದ ಬಗ್ಗೆ ಕಂದಾಯ ಇಲಾಖೆಗೆ ಗ್ರಾಮ ಪಂಚಾಯತಿ ಮೂಲಕ ಅರ್ಜಿ ಸಲ್ಲಿಸಿದರೂ ನೆಪ ಮಾತ್ರಕ್ಕೆ ಸರ್ವೆ ಆಗಿದೆ. ಇದುವರೆಗೂ ಯಾವುದೇ ಪ್ರಯೋಜನ ಆಗಿಲ್ಲ, ಇದರಿಂದಾಗಿ ಈ ವ್ಯಾಪ್ತಿಯ ರೈತರ ಜಾನುವಾರುಗಳಿಗೆ ನೀರಿನ ಗತಿಯೇ ಇಲ್ಲದಾಗಿದೆ ಸಂಬಂಧಿಸಿದ ಇಲಾಖೆಯವರು ಗಮನ ಹರಿಸಿ ಸರಿಪಡಿಸುವಂತೆ ಗ್ರಾಮಸ್ಥರ ಒತ್ತಾಯವಾಗಿದೆ.