ಗೋಣಿಕೊಪ್ಪ ವರದಿ, ಆ. 30: ಕೊಡಗು ಕ್ರೀಡಾ ಭಾರತಿ ಸಂಸ್ಥೆ ವತಿಯಿಂದÀ ಹಾಕಿ ಮಾಂತ್ರಿಕ ದ್ಯಾನ್ ಚಂದ್ ಸಿಂಗ್ ಜನ್ಮ ಜಯಂತಿ ಅಂಗವಾಗಿ ಧನುಗಾಲ ಗ್ರಾಮದ ಸರ್ಕಾರಿ ಶಾಲಾ ಮೈದಾನದಲ್ಲಿ ಭಾನುವಾರ ಸರಳ ಕಾರ್ಯಕ್ರಮ ನಡೆಸಲಾಯಿತು.

ಕ್ರೀಡಾ ಭಾರತಿ ಜಿಲ್ಲಾ ಅಧÀ್ಯಕ್ಷ ಒಲಂಪಿಯನ್ ಬಾಳೆಯಡ ಸುಬ್ರಮಣಿ ಉದ್ಘಾಟಿಸಿದರು.

ಕಳೆದ ಶೈಕ್ಷಣಿಕ ವರ್ಷದಲ್ಲಿ ಶಾಲಾ ಕ್ರೀಡಾ ಕೂಟದಲ್ಲಿ ರಾಜ್ಯಮಟ್ಟದ ಕಬ್ಬಡಿಯಲ್ಲಿ ಭಾಗವಹಿಸಿದ ಹುದಿಕೇರಿ ಜನತಾ ಪ್ರೌಢಶಾಲೆಯ ಮುತ್ತ, ಅಥ್ಲೆಟಿಕ್ಸ್‍ನಲ್ಲಿ ಭಾಗವಹಿಸಿದ್ದ ಪಾಲಿಬೆಟ್ಟ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ದಾವಲ್, ಮತ್ತು ಕುಟ್ಟ ಹಿರಿಯ ಪ್ರಾಥಮಿಕ ಶಾಲೆಯ ಸುನಿಲ್ ಅವರನ್ನು ಸನ್ಮಾನಿಸಲಾಯಿತು.

ಇದರ ಪ್ರಯುಕ್ತ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಡಿ. ಮೋನಿಕಾ, ದ್ವಿತೀಯ ಸ್ಥಾನ ವಿಜೇತೆ ಬಿ.ಸಿ. ಸವಿತಾ, ತೃತೀಯ ಸ್ಥಾನ ಪಡೆದ ಎಚ್.ಎಲ್. ರಾಜೇಲ್ ಅವರುಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ದ್ಯಾನ್‍ಚಂದ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಲಾಯಿತು. ಕ್ರೀಡಾಭಾರತಿ ಜಿಲ್ಲಾ ಕಾರ್ಯದರ್ಶಿ ರೋಹಿತ್, ಸಮಿತಿ ಸದಸ್ಯರಾದÀ ಮೀರಾ ಅಶೋಕ್, ಕುಟ್ಟಪ್ಪ, ಕೆ.ಯು. ಸುಬ್ರಮಣ, ಅಲೀಮ, ಪ್ರಭುಕುಮಾರ್, ವನವಾಸಿ ಕಲ್ಯಾಣ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹರೀಶ್, ಸ್ಥಳೀಯರಾದ ಚೆಪ್ಪುಡೀರ ಪ್ರದೀಪ್ ಇದ್ದರು.