ವೀರಾಜಪೇಟೆ, ಆ. 29: ವೀರಾಜಪೇಟೆಯ ದೊಡ್ಡಟ್ಟಿಚೌಕಿ ಬಳಿಯಲ್ಲಿ ಮೊಬೈಲ್‍ನ್ನು ಬಳಸಿಕೊಂಡು ಒಂದಂಕಿ ನಂಬರಿನ ಜೂಜಾಟದಲ್ಲಿ ತೊಡಗಿದ್ದ ಪ್ಯಾಟರಿಕ್ ಹಾಗೂ ಖಲೀಂ ಎಂಬಿಬ್ಬರನ್ನು ಇಲ್ಲಿನ ನಗರ ಪೊಲೀಸರು ಬಂಧಿಸಿದ್ದಾರೆ. ಅಪರಾಹ್ನ 4 ಗಂಟೆಯ ಸಮಯದಲ್ಲಿ ಜನರನ್ನು ಸೇರಿಸಿಕೊಂಡು ಒಂದಂಕಿ ನಂಬರಿನ ಜೂಜಾಟವಾಡುತ್ತಿದ್ದಾರೆಂದು ನಗರ ಪೊಲೀಸರಿಗೆ ಸಾರ್ವಜನಿಕರಿಂದ ದೊರೆತ ಸುಳಿವಿನ ಮೇರೆ ನಗರ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಬೋಜಪ್ಪ ಸಿಬ್ಬಂದಿಗಳಾದ ಸಂತೋಷ್, ಮುಸ್ತಾಫ ಹಾಗೂ ಗಿರೀಶ್ ಎಂಬವರು ದಾಳಿ ನಡೆಸಿದಾಗ ಪಣಕ್ಕೆ ಕಟ್ಟಿದ್ದ ರೂ. 10,670 ನಗದು ಹಣ ಹಾಗೂ ಎರಡು ಮೊಬೈಲ್‍ನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿದ್ದಾರೆ.