ನಾಪೆÇೀಕ್ಲು, ಆ. 28: ಕೋವಿಡ್ 19 ಹಿನೆÀ್ನಲೆಯಲ್ಲಿ ನಾಪೆÇೀಕ್ಲು ವ್ಯಾಪ್ತಿಯಲ್ಲಿ ಈ ವರ್ಷದ ಕೈಲ್ ಮುಹೂರ್ತ ಹಬ್ಬವನ್ನು ಸರಳವಾಗಿ ತಮ್ಮ ಮನೆಗಳಲ್ಲಿಯೇ ಆಚರಿಸಲಾಯಿತು.
ಹಬ್ಬದ ಪ್ರಯುಕ್ತ ಮಾಡಲಾಗುವ ವಿಶೇಷ ಖಾದ್ಯಗಳು, ಆಯುಧ ಪೂಜೆ ಸಂಪ್ರದಾಯದಂತೆ ನಡೆಯಿತು. ಆದರೆ, ಗ್ರಾಮಸ್ಥರೆಲ್ಲಾ ಒಟ್ಟುಗೂಡಿ ಗ್ರಾಮದ ಮೈದಾನಗಳಲ್ಲಿ ಏರ್ಪಡಿಸಲಾಗುತ್ತಿದ್ದ ತೆಂಗಿನ ಕಾಯಿಗೆ ಗುಂಡು ಹಾರಿಸುವ ಸ್ಪರ್ಧೆ ಸೇರಿದಂತೆ ವಿವಿಧ ಆಟೋಟಗಳ ಸ್ಪರ್ಧೆಗಳನ್ನು ರದ್ದುಗೊಳಿಸಲಾಯಿತು.
ಕೊರೊನಾ, ಪದ್ಧತಿ ಸಂಪ್ರದಾಯಕ್ಕೆ ಅಡ್ಡಿ ಮಾಡದಿದ್ದರೂ, ಸಾರ್ವಜನಿಕ ಆಟೋಟ ಸ್ಪರ್ಧೆಗಳಿಗೆ ತೊಂದರೆ ಉಂಟು ಮಾಡಿರುವದು ಸ್ಪಷ್ಟವಾಗಿ ಕಂಡು ಬಂತು.