ನಾಪೆÇೀಕ್ಲು, ಆ. 27: ನಾನು ಜಿಲ್ಲೆಯ ವಿವಿಧೆಡೆಗಳಲ್ಲಿ ಕಿಟ್ ವಿತರಿಸುತ್ತಿರುವದು ಕಷ್ಟದಲ್ಲಿ ಇರುವ ಕುಟುಂಬಗಳಿಗೆ ಸಹಾಯ ಮಾಡುವದಕ್ಕಾಗಿ. ಇದರಲ್ಲಿ ಯಾವದೇ ಸ್ವಾರ್ಥವಿಲ್ಲ. ನನಗೆ ಶಾಸಕ, ಸಂಸದ, ಮಂತ್ರಿ ಆಗುವ ಯಾವದೇ ಆಸೆ ಇಲ್ಲ ಎಂದು ಕೆಪಿಸಿಸಿ ಕಾನೂನು ಘಟಕ ಹಾಗೂ ಮಾನವ ಹಕ್ಕು ಸಮಿತಿ ರಾಜ್ಯಾಧ್ಯಕ್ಷ ಅಜ್ಜಿಕುಟ್ಟಿರ ಎಸ್.ಪೆÇನ್ನಣ್ಣ ಹೇಳಿದರು.

ನಾಪೆÇೀಕ್ಲು ಕೊಡವ ಸಮಾಜದಲ್ಲಿ ದಿ. ಎ.ಕೆ.ಸುಬ್ಬಯ್ಯ ಮತ್ತು ಪೆÇನ್ನಮ್ಮ ದತ್ತಿನಿಧಿ ಮತ್ತು ಶೈಕ್ಷಣಿಕ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಕಿಟ್ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಇದರ ಹಿಂದೆ ಯಾವದೇ ದುರುದ್ದೇಶವಿಲ್ಲ. ಕೊರೊನಾ ಕಾರಣದಿಂದ ಸಂಕಷ್ಟಕ್ಕೆ ಒಳಗಾದ ಕುಟುಂಬಗಳಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಇದನ್ನು ನೀಡಲಾಗಿದೆ. ನಾವೆಲ್ಲ ಒಂದೇ. ಎಲ್ಲರೂ ಜೊತೆಯಾಗಿ, ಒಗ್ಗಟ್ಟಾಗಿ ಸಂವಿಧಾನ ಬದ್ಧವಾಗಿ ಮುನ್ನಡೆದರೆ ಸಮಾಜ ಉದ್ದಾರ ಆಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್, ಹಿರಿಯ ಕಾಂಗ್ರೆಸಿಗ ಅರೆಯಡ ಡಿ.ಸೋಮಪ್ಪ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ನೆರವಂಡ ಉಮೇಶ್ ಮಾತನಾಡಿದರು.

ವೇದಿಕೆಯಲ್ಲಿ ಮುಖಂಡರಾದ ಪಿ.ಎಂ.ಖಾಸಿಂ, ಅನಿಲ್ ಸಂಪಾಜೆ, ಸುದೈ ನಾಣಯ್ಯ, ಬಾಚಮಂಡ ಲವ ಚಿಣ್ಣಪ್ಪ, ಸುರಯ್ಯ ಅಬ್ರಾಹಂ, ರಾಜೇಶ್ವರಿ, ಉದಿಯಂಡ ಸುಭಾಷ್, ಅಬ್ದುಲ್ ರಹೆಮಾನ್, ರಾಜ್ಯ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಹ್ಯಾರೀಸ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಸುರೇಶ್, ಕೊಟ್ಟಮುಡಿ ಹಂಸ, ಮತ್ತಿತರರು ಇದ್ದರು.

ಚೋಕಿರ ಯಾನಾ ಸಜಿತ್ ಪ್ರಾರ್ಥನೆ, ಕುಲ್ಲೇಟಿರ ಅರುಣ್ ಬೇಬ ಸ್ವಾಗತ, ದಯಾನಂದ್ ನಿರೂಪಿಸಿ, ನಾಪೆÇೀಕ್ಲು ವಲಯ ಕಾಂಗ್ರೆಸ್ ಅಧ್ಯಕ್ಷ ಮಾಚೆಟ್ಟಿರ ಕುಶು ಕುಶಾಲಪ್ಪ ವಂದಿಸಿದರು. ಈ ಸಂದರ್ಭದಲ್ಲಿ ನಾಪೆÇೀಕ್ಲು ಬ್ಲಾಕ್ ಕಾಂಗ್ರೆಸ್‍ಗೆ ಒಳಪಟ್ಟ 18 ಗ್ರಾಮ ಪಂಚಾಯಿತಿಗಳ 650 ಜನರಿಗೆ ಕಿಟ್ ವಿತರಿಸಲಾಯಿತು.