ವೀರಾಜಪೇಟೆ, ಆ.3: ವೀರಾಜಪೇಟೆಯ ಚಿಕ್ಕಪೇಟೆಯ ಜೂನಿಯರ್ ಕಾಲೇಜು ಬಳಿಯಿಂದ ಬೀರಾಂಗಾಡುವಿಗೆ ತೆರಳುವ ರಸ್ತೆಯನ್ನು ಇಂದು ಸೀಲ್ಡೌನ್ ಮಾಡಲಾಗಿದೆ. ಮೂರು ದಿನಗಳ ಹಿಂದೆ ಬೆಂಗಳೂರಿನಿಂದ ಬೀರಾಂಗಾಡುವಿನ ಸಂಬಂಧಿಕರ ಮನೆಗೆ ಬಂದ 30 ವರ್ಷ ವಯಸ್ಸಿನ ಪುರುಷನಲ್ಲಿ ಕೊರೊನಾ ಸೋಂಕು ಪತ್ತೆಯಾದ್ದರಿಂದ ಬೀರಾಂಗಾಡು ರಸ್ತೆಯನ್ನು ಸೀಲ್ಡೌನ್ ಮಾಡಲಾಗಿದೆ.