ವೀರಾಜಪೇಟೆ, ಆ. 3: ವೀರಾಜಪೇಟೆಯ ಫೀ.ಮಾ. ಕಾರ್ಯಪ್ಪ ರಸ್ತೆಯ ಒಂದು ಭಾಗವನ್ನು ತಾ. 1ರಂದು ಸೀಲ್ಡೌನ್ ಮಾಡಿದ್ದರೂ ಅಲ್ಲಿನ ನಿವಾಸಿ ವೆಂಕಟೇನ್ ಎಂಬವರು ಸೀಲ್ಡೌನ್ ನಿಯಮ ಉಲ್ಲಂಘಿಸಿ ರಾತ್ರಿ ಹಗಲು ಹೊರಗಡೆ ಸಂಚರಿಸುತಿರುವದಲ್ಲದೆ, ಖಾಸಗಿ ಬಸ್ಸು ನಿಲ್ದಾಣದಲ್ಲಿರುವ ತನ್ನ ಅಂಗಡಿಯನ್ನು ತೆರೆದು ವ್ಯಾಪಾರ ನಡೆಸುತ್ತಿರುವÀ ಕುರಿತು ಇಲ್ಲಿನ ಪ.ಪಂ.ಯ ಮುಖ್ಯಾಧಿಕಾರಿ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಒಂದನೇ ವಾರ್ಡ್ನ ಕೊರೊನಾ ಜಾಗೃತಿ ಸಮಿತಿಯ ಉಸ್ತುವಾರಿ ಫಸಿಹಃತಬ್ಸಮ್, ಸಮಿತಿ ಸದಸ್ಯರಾದ ಅನಿಲ್ಕುಮಾರ್, ಮನ್ಸೂರ್ ಆಲಿ ಹಾಗೂ ಜೋಶ್ ಡಿಸೋಜಾ, ಪಟ್ಟಣ ಪಂಚಾಯಿತಿಗೆ ಇಂದು ನೀಡಿದ ದೂರಿನ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿಯಿಂದ ಪೊಲೀಸರಿಗೆ ದೂರು ನೀಡಲಾಗಿದೆ.