ವೀರಾಜಪೇಟೆ, ಆ.3: ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಲ್ಯಾಬ್ ವಿಭಾಗದ 26 ವರ್ಷದ ಮಹಿಳಾ ಸಿಬ್ಬಂದಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇಲ್ಲಿನ ಲೇಬರ್ ವಾರ್ಡ್‍ನಲ್ಲಿ ಬಾಣಂತಿ ಮಹಿಳೆಯೊಬ್ಬರಿಗೂ ಕೊರೊನಾ ಪಾಸಿಟಿವ್ ಬಂದ ಕಾರಣ ಇಂದು ಅಪರಾಹ್ನ 12ಗಂಟೆಯಿಂದ ತಾ. 4ರ ಅಪರಾಹ್ನ 12ಗಂಟೆಯವರೆಗೆ ಆಸ್ಪತ್ರೆಯನ್ನು ಸೀಲ್‍ಡೌನ್ ಮಾಡಲಾಗಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ: ವಿಶ್ವನಾಥ್ ಸಿಂಪಿ ತಿಳಿಸಿದ್ದಾರೆ. ಬಾಣಂತಿಯನ್ನು ನಿನ್ನೆ ದಿನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದು ಆಕೆಯ ಸೋಂಕಿತ ವರದಿ ಇಂದು ಬಂದಿದೆ. ಆದ್ದರಿಂದ ಆಕೆಯನ್ನು ಮನೆಯಿಂದಲೇ ಮಡಿಕೇರಿ ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಗಿದೆ.