ಶನಿವಾರಸಂತೆ, ಆ. 2: ಶನಿವಾರಸಂತೆ ಪೊಲೀಸ್ ಠಾಣೆ ಎಎಸ್‍ಐ ಗೋವಿಂದ್ ಅವರ ಮೇಲೆ ಜಿಲ್ಲಾ ದಲಿತ ಒಕ್ಕೂಟದ ಕೆಲವು ಮುಖಂಡರುಗಳು ಪತ್ರಿಕಾ ಗೋಷ್ಠಿಯಲ್ಲಿ ಮಾಡಿರುವ ಆರೋಪಗಳು ಆಧಾರ ರಹಿತ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಜೆ.ಡಿ.ಈರಪ್ಪ ಹೇಳಿದರು. ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ದಸಂಸ ಶನಿವಾರಸಂತೆ ಹೋಬಳಿ ಅಧ್ಯಕ್ಷ ಎಸ್.ಎಸ್. ಶಿವಲಿಂಗ ಮಾತನಾಡಿ, ದಲಿತ ಒಕ್ಕೂಟದ ಮುಖಂಡರುಗಳು ಒಕ್ಕೂಟ ಗಳ ಗಮನಕ್ಕೂ ತಾರದೆ ಒಕ್ಕೂಟದ ಹೆಸರನ್ನು ದುರ್ಬಳಕೆ ಮಾಡಿ ಕೊಂಡಿದ್ದಾರೆ ಎಂದು ದೂರಿದರು. ಗೋಷ್ಠಿಯಲ್ಲಿ ಅಂಬೇಡ್ಕರ್ ಅಭಿಮಾನಿ ಬಳಗದ ತಾಲೂಕು ಅಧ್ಯಕ್ಷ ವಿರೂಪಾಕ್ಷ ಸಂದೀಪ್ ದಸಂಸ ಮತ್ತು ಅಂಬೇಡ್ಕರ್ ಅಭಿಮಾನಿ ಬಳಗದ ಸದಸ್ಯರುಗಳಾದ ವಸಂತ್, ಎಸ್.ಜೆ. ರಾಜಪ್ಪ, ನಾಗರಾಜ್, ಗುರುಪ್ರಸಾದ್, ವಿನೋದ್ ಇದ್ದರು.