ಮಡಿಕೇರಿ, ಆ. 2: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ 25ನೇ ವರ್ಷದ ಸಾರ್ವತ್ರಿಕ ‘ಕಕ್ಕಡ ಪದ್‍ನೆಟ್ಟ್’ ನಮ್ಮೆಯನ್ನು ಕ್ಯಾಪಿಟಲ್ ವಿಲೇಜಿನಲ್ಲಿ ಆಚರಿಸಲಾಯಿತು. ಕೊಡವ ಲ್ಯಾಂಡ್ ಸ್ವಾಯತ್ತತೆ ಹಕ್ಕೊತ್ತಾಯ, ಕೊಡವ ಸೂಕ್ಷ್ಮಾತಿ ಸೂಕ್ಷ್ಮ ಅಲ್ಪಸಂಖ್ಯಾತ ಕೊಡವ ಬುಡಕಟ್ಟು ಕುಲಕ್ಕೆ ಸಂವಿಧಾನದ 342ನೇ ವಿಧಿ ಪ್ರಕಾರ ರಾಜ್ಯಾಂಗ ಖಾತರಿ, ಕೊಡವ ತಕ್ಕನ್ನು ಸಂವಿಧಾನದ 8ನೇ ಶೆಡ್ಯೂಲ್ಗೆ ಸೇರಿಸಬೇಕು ಮತ್ತು ಮೈಕ್ರೋ ಮೈನಾರಿಟಿ ಕೊಡವ ಬುಡಕಟ್ಟು ಕುಲ ಮತ್ತು ಅವರ ಅಪೂರ್ವ ಸಾಂಸ್ಕøತಿಕ ಪರಂಪರೆಯನ್ನು ವಿಶ್ವ ಸಂಸ್ಥೆಯ ಯುನೆಸ್ಕೋದ ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ಪಟ್ಟಿಗೆ ಸೇರಿಸಬೇಕೆಂಬ ಹಕ್ಕೊತ್ತಾಯದ ನಿರ್ಣಯವನ್ನು ಅಂಗೀಕರಿ ಸಲಾಯಿತು.ಕ್ಯಾಪಿಟಲ್ ವಿಲೇಜ್‍ನಲ್ಲಿ ಕಕ್ಕಡ ಪದ್‍ನೆಟ್ಟ್ ನಮ್ಮೆಯನ್ನು ಸಕಲ ಸಾಂಸ್ಕøತಿಕ ವಿಧಿ ವಿಧಾನಗಳ ಮೂಲಕ ಆಚರಿಸಲಾಯಿತು.ಭತ್ತದ ಗದ್ದೆಯಲ್ಲಿ ನಾಟಿಯನ್ನು ನೆಟ್ಟು ನಂತರ ಮದ್ದ್ ಪುಟ್ಟ್ ಮತ್ತು ಮದ್ದ್ ಪಾಯಸ ಹಾಗೂ ನಾಡು ಕೋಳಿಯ ಭಕ್ಷ್ಯವನ್ನು ಪ್ರಸಾದದಂತೆ ಎಲ್ಲರೂ ಸ್ವೀಕರಿಸಿದರು.

ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಿಯಂಡ ಪ್ರಕಾಶ್, ಬೊಪ್ಪಂಡ ಬೊಳ್ಳಮ್ಮ, ಪಟ್ಟಮಾಡ ಲಲಿತ, ಇಟ್ಟಿರ ಸಬಿತಾ, ನಂದಿನೆರವಂಡ ರೇಖಾ, ಅಪ್ಪಚ್ಚಿರ ರಮ್ಮಿ ನಾಣಯ್ಯ, ಅಪ್ಪಚ್ಚಿರ ರೀನಾ ನಾಣಯ್ಯ, ಪುಲ್ಲೇರ ಸ್ವಾತಿ, ನಂದಿನೆರವಂಡ ನಿಶಾ, ಚೋಳಪಂಡ ಜ್ಯೋತಿ, ಕೇಚಮಾಡ ಶಿಲ್ಪ, ಲೆ. ಕರ್ನಲ್ ಪಾರ್ವತಿ, ನಂದಿನೆರವಂಡ ವಿಜು,

(ಮೊದಲ ಪುಟದಿಂದ) ನಂದಿನೆರವಂಡ ಬೀನಾ, ನಂದಿನೆರವಂಡ ಸುಮಿತ್ರಾ, ಮಡಿಕೇರಿ ಕೊಡವ ಸಮಾಜ ಅಧ್ಯಕ್ಷ ಕೊಂಗಂಡ ದೇವಯ್ಯ, ಸುರೇಶ್, ಪಾರುವಂಗಡ ನವೀನ್, ಅಜ್ಜಿಕುಟ್ಟಿರ ಲೋಕೇಶ್, ಬೊಟ್ಟಂಗಡ ಗಿರೀಶ್, ಕಿರಿಯಮಾಡ ಶರಿನ್, ಅಪ್ಪೆಯ್ಯಂಗಡ ಮಾಲೆ, ಪುಲ್ಲೇರ ಕಾಳಪ್ಪ, ಮತ್ತಿತರರು ಭಾಗವಹಿಸಿದ್ದರು.