ಸೋಮವಾರಪೇಟೆ, ಆ. 2: ಜಿಲ್ಲೆಯ ಹಿರಿಯ ರಾಜಕಾರಣಿ, ವಿಧಾನ ಪರಿಷತ್ ಮಾಜೀ ಸದಸ್ಯ ಹಾಗೂ ಹಾಲಿ ಸಂಬಾರ ಮಂಡಳಿ ನಿರ್ದೇಶಕ ಎಸ್.ಜಿ. ಮೇದಪ್ಪ ಅವರು ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಕೃಷಿಯ ಸಂಭ್ರಮ ಅನುಭವಿಸಿದರು.

ಶಾಂತಳ್ಳಿಯ ಗದ್ದೆಯಲ್ಲಿ ಇತರ ಕೃಷಿಕರೊಂದಿಗೆ ಭತ್ತದ ಪೈರು ನಾಟಿ ಮಾಡಿದ ಮೇದಪ್ಪ ಅವರು, ಶಾಂತಳ್ಳಿ ವ್ಯಾಪ್ತಿಯಲ್ಲಿ ಕೃಷಿಗೆ ಪೂರಕ ವಾತಾವರಣ ನಿರ್ಮಾಣವಾಗಿದ್ದು, ಎಲ್ಲೆಡೆ ನಾಟಿ ಕಾರ್ಯ ಪ್ರಗತಿಯಲ್ಲಿದೆ. ಕೃಷಿಕರು ಗದ್ದೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಈ ಬಾರಿ ಕೊರೊನಾ ಹಿನ್ನೆಲೆ ಪಟ್ಟಣಗಳಿಂದ ಹೆಚ್ಚಿನ ಮಂದಿ ಗ್ರಾಮಕ್ಕೆ ಆಗಮಿಸಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.