ವೀರಾಜಪೇಟೆ. ಜು. 29: ದೇಶಾದ್ಯಂತ ವೇಗವಾಗಿ ಹರಡುತ್ತಿರುವ ಕೊರೊನಾ ವೈರಸ್ ವಿರುದ್ಧ ಹೋರಾಡುವುದು ಇಂದಿನ ಪರಿಸ್ಥಿತಿಯಲ್ಲಿ ಅಗತ್ಯವಾಗಿದೆ. ಕೊರೊನಾ ವೈರಸ್ ಜಾಗೃತಿ ಸಮಿತಿಯು ಈ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಸಾರ್ವಜನಿಕ ವಾಗಿ ಎಲ್ಲರ ಆರೋಗ್ಯ ಕಾಪಾಡು ವುದು ಅವಶ್ಯವಾಗಿದ್ದು, ಇದಕ್ಕೆ ಆಯ್ದ ಸದಸ್ಯರುಗಳ ಸೇವೆ ಬಳಕೆಯಾಗಬೇಕು ಎಂದು ಪ.ಪಂ. ಅಭಿಯಂತರ ಎಂ.ಪಿ. ಹೇಮ್‍ಕುಮಾರ್ ಹೇಳಿದರು.
ವೀರಾಜಪೇಟೆ ಪ.ಪಂ.ಯ ನೇತೃತ್ವದಲ್ಲಿ ಕೊರೊನಾ ವೈರಸ್ ಜಾಗೃತಿ ಸಮಿತಿ ರಚನೆಯ ಸಂಬಂಧದಲ್ಲಿ ಇಲ್ಲಿನ ಚಿಕ್ಕಪೇಟೆಯ ಜೆ.ಪಿ.ಎನ್ ಪ್ರೌಢಶಾಲೆ ಸಭಾಂಗಣ ದಲ್ಲಿ ಆಯೋಜಿಸಿದ್ದ ಕೊರೊನಾ ಜಾಗೃತಿ ಸಮಿತಿ ರಚನೆ ಸಭೆಯಲ್ಲಿ ಭಾಗವಹಿಸಿದ್ದ ಹೇಮ್‍ಕುಮಾರ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ:ವಿಶ್ವನಾಥ್ ಸಿಂಪಿ ಮಾತನಾಡಿ ಸರಕಾರದ ಆದೇಶದಂತೆ ಪ.ಪಂ. ವತಿಯಿಂದ ರಚಿಸಲಾಗುವ ಕೊರೊನಾ ವೈರಸ್‍ನ ಜಾಗೃತಿ ಸಮಿತಿಗೆ ಆಸ್ಪತ್ರೆಯಿಂದ ಎಲ್ಲ ಸಹಕಾರ ನೀಡಲಾಗುವುದು. ಜಾಗೃತಿ ಸಮಿತಿಯು ಕೊರೊನಾ ವೈರಸ್ ಹರಡದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕು ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಹದಿನಾರನೇ ವಾರ್ಡ್‍ನ ಸದಸ್ಯೆ ಆಶಾ ಸುಬ್ಬಯ್ಯ ಅವರ ಉಸ್ತುವಾರಿಯಲ್ಲಿ ಐ.ಸಿ.ಚಿಣ್ಣಪ್ಪ, ಸಿ.ರಮೇಶ್, ಯಶೋಧ ದೇವಯ್ಯ, ಅಂಗನವಾಡಿ ಶಿಕ್ಷಕಿ ಪುಷ್ಪ ವಾಸು, ಮಹಿಳಾ ಪೊಲೀಸ್ ಗೀತಾ ಇವರುಗಳನ್ನು ಆಯ್ಕೆ ಮಾಡಲಾಯಿತು.
ಹದಿನೇಳನೇ ವಾರ್ಡ್‍ನ ಸದಸ್ಯೆ ಎಚ್.ಎಂ. ಪೂರ್ಣಿಮಾ ಉಸ್ತುವಾರಿ ಯಲ್ಲಿ ನಂದಕುಮಾರ್, ಸಾಗರ್, ರಾಕೇಶ್, ಅಂಗನವಾಡಿ ಶಿಕ್ಷಕಿ ಪುಷ್ಪ, ಪೊಲೀಸ್ ಕಾನ್ಸ್‍ಟೇಬಲ್ ಲೋಕೇಶ್ ಇವರುಗಳನ್ನು ಸಭೆ ಆಯ್ಕೆ ಮಾಡಿತು.
ಹದಿನೆಂಟನೇ ವಾರ್ಡ್‍ನ ಸದಸ್ಯೆ ಯಶೋಧ ಮಂದಣ್ಣ ಅವರ ಉಸ್ತುವಾರಿಯಲ್ಲಿ ಸಮಿತಿ ಸದಸ್ಯರಾಗಿ ಅನಿಲ್ ಮಂದಣ್ಣ, ಯೋಗೀಶ್, ಕವಿತಾ, ಅಂಗನವಾಡಿ ಪರವಾಗಿ ಎ.ಟಿ.ರಾಧಾ, ಮಹಿಳಾ ಪೊಲೀಸ್ ಕಾವೇರಮ್ಮ ಇವರುಗಳು ಆಯ್ಕೆಯಾದರು. ಪ.ಪಂ.ಯ ಕೊರೊನಾ ಜಾಗೃತಿ ಸಮಿತಿ ಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಅಂತರ ಕಾಯ್ದುಕೊಂಡು ಭಾಗವಹಿಸಿದ್ದರು.