ಮಡಿಕೇರಿ, ಜು. 29: ಕೋವಿಡ್-19 ಪ್ರಯುಕ್ತ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಾಗೂ ಮಕ್ಕಳ ಸುರಕ್ಷತೆಯ ನಿಟ್ಟಿನಲ್ಲಿ 2020-21ನೇ ಸಾಲಿನಲ್ಲಿ ಬಾಲ ಭವನ ಸೊಸೈಟಿ, ಬೆಂಗಳೂರು, ಜಿಲ್ಲಾ ಬಾಲಭವನ ಮುಖಾಂತರ 10-15 ವರ್ಷದೊಳಗಿನ ಮಕ್ಕಳಿಗೆ ತಾ. 25 ರಿಂದ ಡಿಸೆಂಬರ್ 27 ರವರೆಗೆ ಮಧ್ಯಾಹ್ನ 3 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಪ್ರತಿ ಶನಿವಾರ ಹಾಗೂ ಭಾನುವಾರಗಳಂದು ಮನೆಯಲ್ಲೇ ಮಾಸ್ಕ್ ತಯಾರಿಕೆ, ಚಿತ್ರಕಲೆ, ಕರಕುಶಲ, ಜೇಡಿಮಣ್ಣಿನ ಕಲೆ, ಕಥೆ, ಕವನ, ಪ್ರಬಂಧ ಬರೆಯುವುದು ಮತ್ತು ವಾಚಿಸುವುದು, ನೃತ್ಯ, ಸಂಗೀತಾ, ನಾಟಕ, ಯೋಗ, ವಿಜ್ಞಾನ, ಆರ್ಗಾನಿಕ್ ಹ್ಯಾಂಡ್ ವಾಷ್ ತಯಾರಿಕೆ ಮತ್ತಿತರ ಕ್ಷೇತ್ರಗಳಲ್ಲಿ ಆನ್‍ಲೈನ್ ಮೂಲಕ ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳನ್ನು ಪ್ರಾರಂಭಿಸಲಾಗಿದೆ.

ಭಾಗವಹಿಸಲು ಆಸಕ್ತಿ ಇರುವ ಮಕ್ಕಳು ತಮ್ಮ ಹೆಸರನ್ನು ತಾ. 31 ರೊಳಗೆ ಮೊಬೈಲ್ ಸಂಖ್ಯೆ 8618861505, 6363285685 ನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.