ನಾಪೆÇೀಕ್ಲು, ಜು. 27: ಜಿಲ್ಲೆಯಲ್ಲಿ ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಹಿನೆÀ್ನಲೆಯಲ್ಲಿ ನಾಪೆÇೀಕ್ಲುವಿನಲ್ಲಿ ಸೋಮವಾರ ನಡೆಯುವ ವಾರದ ಸಂತೆಯನ್ನು ವಲಯ ಚೇಂಬರ್ ಆಫ್ ಕಾಮರ್ಸ್ ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ನಡೆದ ಜಂಟಿ ಸಭೆಯಲ್ಲಿ ರದ್ದುಗೊಳಿಸಲಾಗಿತ್ತು.

ಆದರೆ, ಸೋಮವಾರದಿಂದ ಮಾರುಕಟ್ಟೆಯನ್ನು ಪುನರಾರಂಭಿಸಲಾಗಿದೆ. ಮಾರುಕಟ್ಟೆ ಆರಂಭಿಸುವ ಬಗ್ಗೆ ವ್ಯಾಪಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಸೂಕ್ತ ಮಾಹಿತಿ ಇಲ್ಲದ ಕಾರಣ ಸಂತೆಯಲ್ಲಿ ಜನ ಸಂಖ್ಯೆ ವಿರಳವಾಗಿತ್ತು.

ನಾಪೆÇೀಕ್ಲು ಪಟ್ಟಣದ ಬೇತು ರಸ್ತೆಯಲ್ಲಿ ಎರಡು ಮತ್ತು ಸಮೀಪದ ಎಮ್ಮೆಮಾಡು ಗ್ರಾಮ ಪಂಚಾಯಿತಿಗೆ ಒಳಪಟ್ಟ ಕುರುಳಿ ಪರಂಬುವಿನಲ್ಲಿ ಒಂದು ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಆದರೂ ಜನರು ಈ ಬಗ್ಗೆ ಜಾಗೃತರಾಗದೆ ಪಟ್ಟಣದಲ್ಲಿ ತಿರುಗಾಡುತ್ತಿರುವದು ಕಂಡು ಬಂದಿತು.

ಗ್ರಾಮ ಪಂಚಾಯಿತಿ ವತಿಯಿಂದ ಪಟ್ಟಣದ ಜನತೆ ಸುರಕ್ಷಿತ ಕ್ರಮಕೈಗೊಳ್ಳುವಂತೆ ಹಾಗೂ ಎಚ್ಚರ ವಹಿಸುವಂತೆ ಧ್ವನಿ ವರ್ಧಕದ ಮೂಲಕ ಎಚ್ಚರಿಕೆ ನೀಡಲಾಯಿತು.