ಮಡಿಕೇರಿ, ಮೇ 26: 2019-20ನೇ ಸಾಲಿನ ಹಸಿರು ಕರ್ನಾಟಕ, ಎಂ.ಎಂ.ಎಸ್.ವಿ. ಮತ್ತು ಆರ್.ಎಸ್.ಪಿ.ಡಿ. ಯೋಜನೆಯಡಿಯಲ್ಲಿ ಮಡಿಕೇರಿ ಅರಣ್ಯ ವಲಯದ ಸಸ್ಯಕ್ಷೇತ್ರದಲ್ಲಿ ಗಿಡಗಳನ್ನು ಬೆಳೆಸಲಾಗಿದ್ದು, ತಮ್ಮ ಜಮೀನಿನಲ್ಲಿ ಈ ಸಸಿಗಳನ್ನು ನೆಟ್ಟು ಬೆಳೆಸಲು ಇಚ್ಚಿಸುವ ರೈತರು ಮಡಿಕೇರಿ ಅರಣ್ಯ ವಲಯದ ಸಸ್ಯಕ್ಷೇತ್ರಕ್ಕೆ ಭೇಟಿ ನೀಡಿ ಇಲಾಖೆಯು ನಿಗದಿಪಡಿಸಿರುವ ದರಗಳನ್ನು ಪಾವತಿಸಿ ಸಸಿಗಳನ್ನು ಪಡೆಯಬಹುದು.

ಸೂಚನೆಗಳು: 6x9 ಮತ್ತು 8x12 ಅಳತೆಯ ಹೊಂಗೆ, ಹಲಸು, ಸೀಮಾರೋಬ, ಸೀತಾಫಲ, ಮಹಾಗನಿ, ನೇರಳೆ, ಸಂಪಿಗೆ, ನೆಲ್ಲಿ, ಶಿವನಿ, ಹೊನ್ನೆ, ಶ್ರೀಗಂಧ, ಹೊಳೆಮತ್ತಿ, ಹೆಬ್ಬೇವು, ಸೀಬೆ, ಸಿಲ್ವರ್‍ಓಕ್ ಇತರೆ ಸಸಿಗಳು ಲಭ್ಯವಿದ್ದು, 6x9 ಅಳತೆಯ ಸಸಿಗಳಿಗೆ ರೂ. 1 ಮತ್ತು 6x9 ಅಳತೆಯ ಸಸಿಗಳಿಗೆ ರೂ. 3 ರಂತೆ ಪಾವತಿಸಿ ಮಡಿಕೇರಿ ಸಸ್ಯಕ್ಷೇತ್ರದಿಂದ ಸಸಿಗಳನ್ನು ಪಡೆಯಬಹುದು.

ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 08272-298161 ಹಾಗೂ ಉಪ ವಲಯ ಅರಣ್ಯಾಧಿಕಾರಿಗಳಾದ ಬಾಬು ರಾಥೋಡ್-9741453166, ಆನಂದ ಜಯಗೌಡರ-8197888373, ಅರಣ್ಯ ರಕ್ಷಕರಾದ ಭವ್ಯ ಹೆಚ್.ಪಿ.-9482246103, ಗಣಪತಿ ಮಂಜುನಾಥ ನಾಯಕ್-8197753866 ಇವರುಗಳನ್ನು ಸಂಪರ್ಕಿಸಬಹುದು.

ದಾಖಲಾತಿಯೊಂದಿಗೆ ಸಸಿ ಕೋರಿ ಅರ್ಜಿ, ಜಮೀನಿನ ಆರ್‍ಟಿಸಿ ಹಾಗೂ ಪಾಸ್‍ಪೋರ್ಟ್ ಅಳತೆಯ 2 ಭಾವಚಿತ್ರಗಳನ್ನು ಸಲ್ಲಿಸತಕ್ಕದ್ದು.