ಸುಂಟಿಕೊಪ್ಪ, ಮೇ 25 ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಆ್ಯಂಬ್ಯುಲೆನ್ಸ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಎರಡು ವಾಹನಗಳು ಜಖಂ ಗೊಂಡು ಎರಡು ವಾಹನಗಳ ಪ್ರಯಾಣಿಕರು ಪ್ರಾಣಾಪಾÀಯದಿಂದ ಪಾರಾಗಿದ್ದಾರೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಗದ್ದೆಹಳ್ಳದ ವಂದನಾ ಬಾರ್ ಸಮೀಪದ ತಿರುವಿನಲ್ಲಿ ಮೈಸೂರು ಕಡೆಯಿಂದ ಮಡಿಕೇರಿಗೆ ಪ್ರಯಾಣಿಸುತ್ತಿದ್ದ ಮಹೀಂದ್ರ ಝೈಲೋ ಕಾರು ಸುಂಟಿಕೊಪ್ಪದಿಂದ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ರೋಗಿಯನ್ನು ದಾಖಲಿಸಿ ವಾಪಸಾಗುತ್ತಿದ್ದ 108 ಆ್ಯಂಬ್ಯುಲೆನ್ಸ್‍ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಚಾಲಕ ಸೇರಿದಂತೆ ಮೂವರಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. (ಮೊದಲ ಪುಟದಿಂದ) ಕಾರು ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಆ್ಯಂಬ್ಯುಲೆನ್ಸ್‍ಗೆ ಡಿಕ್ಕಿಯಾದ ಪರಿಣಾಮ ಎರಡು ವಾಹನಗಳು ಜಖಂಗೊಂಡು ಕಾರು ಆಪ್ಟಿಕಲ್ ಕೇಬಲ್ ಕಂಬಕ್ಕೆ ಡಿಕ್ಕಿ ಹೊಡೆದು ರಸ್ತೆ ಬದಿ ಚರಂಡಿಗೆ ವಾಲಿ ನಿಂತಿದೆ. ಸುಂಟಿಕೊಪ್ಪ ಸಹಾಯಕ ಪೊಲೀಸ್ ಅಧಿಕಾರಿ ಎಸ್.ಎಸ್. ಶ್ರೀನಿವಾಸ್ ಹಾಗೂ ಸಿಬ್ಬಂದಿ ಸತೀಶ್ ಸ್ಥಳ ಪರಿಶೀಲನೆ ಮಾಡಿ ಎರಡು ವಾಹನಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.ಆ್ಯಂಬ್ಯುಲೆನ್ಸ್‍ಗೆ ಕಾರು ಡಿಕ್ಕಿ