ನಾಪೆÇೀಕ್ಲು, ಮಾ. 30: ಸೋಮವಾರ ಅಗತ್ಯ ವಸ್ತುಗಳು ಮತ್ತು ತರಕಾರಿ ಖರೀದಿಸಲು ಬೆಳಿಗ್ಗೆ 6 ಗಂಟೆಯಿಂದಲೇ ನಾಪೆÇೀಕ್ಲು ಪಟ್ಟಣದಲ್ಲಿ ದಿನಸಿ ಮತ್ತು ತರಕಾರಿ ಪಡೆಯಲು ಜನ ಮುಗಿ ಬಿದ್ದರು.

ಸಾಮಾನು ಖರೀದಿಯನ್ನು ಮಾತ್ರ ದೃಷ್ಟಿಯಲ್ಲಿರಿಸಿಕೊಂಡ ಜನ ಸಾಮಾಜಿಕ ಅಂತರ, ಮಾಸ್ಕ್ ಧರಿಸುವದರತ್ತ ಗಮನ ನೀಡಿದಂತೆ ಕಂಡು ಬರಲಿಲ್ಲ. ಒಟ್ಟಿನಲ್ಲಿ ಸಾಮಾನು ಖರೀದಿ ಒಂದೇ ಅವರ ಉದ್ದೇಶವಾಗಿರುವದು ಬಿಟ್ಟರೆ ಕೊರೊನಾ ವೈರಸ್‍ನ ಬಗ್ಗೆ ಕಿಂಚಿತ್ತೂ ಜಾಗೃತಿಯಾಗಲೀ, ಭಯವಾಗಲಿ ಇದಂತೆ ಕಂಡುಬರಲಿಲ್ಲ. ಮೆಡಿಕಲ್ ಸ್ಟೋರ್‍ಗಳಲ್ಲಿಯೂ, ಖಾಸಗಿ ಕ್ಲಿನಿಕ್‍ಗಳಲ್ಲಿಯೂ ಕೂಡ ಜನ ಒತ್ತೊತ್ತಾಗಿ ನಿಂತಿರುವದು ಕಂಡು ಬಂತು. ಜನರಲ್ಲಿ ಅಂತರ ಕಾಯ್ದುಕೊಳ್ಳುವಂತೆ ನೋಡಲ್ ಅಧಿಕಾರಿ ಇಂದುಶ್ರೀ ಮತ್ತು ತಂಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ ಮತ್ತು ಸಿಬ್ಬಂದಿಗಳ ತಂಡ ಹರಸಾಹಸ ಪಡುತ್ತಿರುವದು ಕಂಡು ಬಂತು. ಪೆÇಲೀಸರ ಮಾತಿಗೆ ಬೆಲೆ ನೀಡದ ಸಾರ್ವಜನಿಕರು ಇವರ ಮಾತಿಗೆ ಕ್ಯಾರೇ ಎನ್ನಲಿಲ್ಲ. ಒಟ್ಟಿನಲ್ಲಿ ಹಬ್ಬ ಹರಿದಿನಗಳಲ್ಲಿ ಸಾಮಾನು ಖರೀದಿಸಲು ಆಗಮಿಸಿದ ಜನರಿಗಿಂತ ಹೆಚ್ಚಿನ ಜನ ನಾಪೆÇೀಕ್ಲು ಪಟ್ಟಣದಲ್ಲಿ ಕಂಡುಬಂತು.

ತರಕಾರಿ ಖಾಲಿ: ಸಾರ್ವಜನಿಕರ ಅನುಕೂಲಕ್ಕಾಗಿ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡಲು ಅನುಕೂಲ ಕಲ್ಪಿಸಲಾಗಿತ್ತು. ಆದರೆ ಜನರ ದಟ್ಟಣೆ ಹೆಚ್ಚಿದ್ದ ಕಾರಣ 10 ಗಂಟೆ ಸಮಯಕ್ಕೆ ಎಲ್ಲಾ ಅಂಗಡಿ ಗಳಲ್ಲೂ ತರಕಾರಿ ಖಾಲಿಯಾಯಿತು. ಅದರೊಂದಿಗೆ ಪಟ್ಟಣದಲ್ಲಿರುವ ತರಕಾರಿ ಅಂಗಡಿಗಳಲ್ಲಿಯೂ ತರಕಾರಿ ಖಾಲಿಯಾಗಿ ಜನ ಪರದಾಡುವಂತಾ ಯಿತು. ದಿನಸಿ ಅಂಗಡಿಗಳಲ್ಲಿಯೂ ದಿನಸಿ ಖಾಲಿಯಾದ ಕಾರಣ ಕೆಲವು ವಸ್ತುಗಳು ಜನರಿಗೆ ಸಿಗದಂತಾಯಿತು. ಇದಕ್ಕೆ ಮೈಸೂರಿನಿಂದ ದಿನಸಿ ಸಾಮಾನು ಬಾರದಿರುವದೇ ಕಾರಣ ಎನ್ನುತ್ತಿದ್ದರು ಅಂಗಡಿ ಮಾಲೀಕರು. ಇದರ ಮಧ್ಯೆ ಕೆಲವು ಅಂಗಡಿಗಳಲ್ಲಿ ಸಿಗರೇಟುಗಳನ್ನು ದುಪ್ಪಟ್ಟು ಬೆಲೆಗೆ ಮಾರುತ್ತಿದ್ದ ಬಗ್ಗೆಯೂ ಸಾರ್ವಜನಿಕರು ಪಂಚಾಯಿತಿಗೆ ದೂರು ನೀಡಿದರು.

ಗ್ರಾ.ಪಂ.ನಿಂದ ಮಾಸ್ಕ್ ವಿತರಣೆ: ನಾಪೆÇೀಕ್ಲು ಗ್ರಾಮ ಪಂಚಾಯಿತಿ ಆಡಳಿತ 300 ಮಾಸ್ಕ್ ತಯಾರಿಸಲು ಕ್ರಮಕೈಗೊಂಡಿದ್ದು, ಇಂದು ತಯಾರಾದ 100 ಮಾಸ್ಕ್‍ಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಿದರು.

ಔಷಧಿ ಸಿಂಪಡಣೆ: ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಎಂ.ಜಿ.ಜಾಹಿರ್ ನಾಪೆÇೀಕ್ಲು ಮಾರುಕಟ್ಟೆಯಿಂದ ಹಳೇತಾಲೂಕು ರಸ್ತೆಯ ಪೆಟ್ರೋಲ್ ಬಂಕ್‍ವರೆಗೆ ಪಟ್ಟಣದಲ್ಲಿ ಕೊರೊನಾ ವೈರಸ್ ತಡೆಗೆ ಔಷಧಿ ಸಿಂಪಡಿಸಿದರು. 12 ಗಂಟೆಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ ಬಳಿಕ ಔಷಧಿ ಸಿಂಪಡಿಸಲು ಆರಂಭಿಸಿದ ಅವರು ಇಡೀ ಪಟ್ಟಣದ ಚರಂಡಿ, ರಸ್ತೆ, ಸಂದಿಗೊಂದಿಗಳಲ್ಲಿ ಔಷಧಿ ಸಿಂಪಡಿಸಿದರು.