ನಾಪೆÇೀಕ್ಲು, ಮಾ. 28: ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ವಾರದ ಸೋಮವಾರ, ಬುಧವಾರ ಮತ್ತು ಶುಕ್ರವಾರ ಮಾತ್ರ ಅಗತ್ಯ ವಸ್ತುಗಳನ್ನು ಖರೀದಿಸಲು ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಅವಕಾಶ ನೀಡಿದ ಕಾರಣದಿಂದ ಇಂದು ನಾಪೆÇೀಕ್ಲು ಪಟ್ಟಣ ಸೇರಿದಂತೆ ಈ ವಿಭಾಗದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು.
ಯಾವದೇ ಸಾರ್ವಜನಿಕರ ಹಾಗೂ ವಾಹನಗಳ ಓಡಾಟ ಹೆಚ್ಚಾಗಿ ಕಂಡು ಬರಲಿಲ್ಲ. ರಸ್ತೆಯಲ್ಲಿ ಓಡಾಡುವ ವಾಹನಗಳು ಮತ್ತು ಜನರನ್ನು ಪೆÇಲೀಸರು ವಿಚಾರಣೆ ನಡೆಸಿ ಕಳುಹಿಸುತ್ತಿದ್ದ ದೃಶ್ಯ ಕಂಡು ಬಂತು. ಬೇತು ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ನೀಡುತ್ತಿದ್ದರೂ ಗ್ರಾಹಕರ ಕೊರತೆ ಕಂಡು ಬಂತು. ಸಾರ್ವಜನಿಕರ ಮತ್ತು ವಾಹನಗಳ ಓಡಾಟದ ಬಗ್ಗೆ ತೀವ್ರ ನಿಗಾ ಇರಿಸಿದ್ದರು. ಸರಕಾರಿ ಆಸ್ಪತ್ರೆ, ಮೆಡಿಕಲ್ ಸ್ಟೋರ್ ಮತ್ತು ಪೆಟ್ರೋಲ್ ಬಂಕ್ ಮಾತ್ರ ತೆರೆಯಲಾಗಿತ್ತು. ಸ್ಥಳೀಯ ನಂದಿನಿ ಕ್ಲಿನಿಕ್‍ಗೆ ಜಿಲ್ಲಾ ಅಬಕಾರಿ ಅಧಿಕಾರಿ ಇಂದುಶ್ರೀ ಭೇಟಿ ನೀಡಿ ತುರ್ತು ಚಿಕಿತ್ಸೆಗೆ ಕಾಯ್ದಿಟ್ಟ ಕೊಠಡಿಗಳ ಬಗ್ಗೆ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ನಾಪೆÇೀಕ್ಲು ಹೋಬಳಿ ಕಂದಾಯ ಪರಿವೀಕ್ಷಕ ಶಿವಕುಮಾರ್, ಗ್ರಾಮ ಲೆಕ್ಕಿಗರಾದ ಜನಾರ್ಧನ್, ಅಮೃತಾ ಮತ್ತಿತರರು ಇದ್ದರು.