ಚೆಟ್ಟಳ್ಳಿ, ಮಾ. 6: ನಿವೃತ್ತ ಮುಖ್ಯೋಪಾಧ್ಯಾಯ ಪಿ.ಜಿ. ಅಂಬೆಕಲ್ ಹಾಗೂ ಕನಕ ಪಿ. ಅಂಬೆಕಲ್ ಬರೆದ ನಿನ್ನ ಪ್ರೇಮದ ಪರಿಯ ಎಂಬ ಕಥಾಸಂಕಲನ ಲೋಕಾರ್ಪಣಾ ಸಮಾರಂಭ ಚೆಟ್ಟಳ್ಳಿ ಪ್ರೌಢಶಾಲೆಯ ಮಂಗಳ ಸಭಾಂಗಣದಲ್ಲಿ ನೆರವೇರಿತು.
ಸಾಹಿತಿ ಬಿ.ಆರ್. ಜೋಯಪ್ಪ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಸಾಹಿತ್ಯದ ಬಗ್ಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಿದಾಗ ಹಲವು ಕೃತಿಗಳು ಹೊರಬರಲು ಸಾಧ್ಯ ಎಂದರು.
ಸುಳ್ಯದ ಸಾಹಿತಿ ಲೀಲಾ ದಾಮೋದರ್ ಸಾಹಿತ್ಯ ರಂಗಕ್ಕೆ ಕೊಡುಗೆ ನೀಡಿದ ಪಿ.ಜಿ. ಅಂಬೆಕಲ್ ಹಾಗೂ ಕನಕ ಅವರ ಕೊಡುಗೆಯ ಬಗ್ಗೆ ಸ್ಮರಿಸಿದರು. ಚೆಟ್ಟಳ್ಳಿ ಪ್ರೌಢಶಾಲೆಯ ಸಂಚಾಲಕ ಮುಳ್ಳಂಡ ರತ್ತು ಚಂಗಪ್ಪ ಮಾತನಾಡಿ, ನಮಗೆ ವಿದ್ಯೆ ನೀಡಿದ ಗುರುಗಳನ್ನು ಸ್ಮರಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದರು. ಗುತ್ತಿಗಾರುವಿನ ಬಂಟಮಲೆ ಅಕಾಡೆಮಿಯ ಅಧ್ಯP್ಷÀ ಎ.ಕೆ. ಹಿಮಕರವರು ಮಾತನಾಡಿ, ನಿನ್ನ ಪ್ರೇಮದ ಪರಿಯ ಕಥಾಸಂಕಲನದ ವಸ್ತು ವಿಷಯ, ಪದಪ್ರಯೋಗದ ಬಗ್ಗೆ ಸವಿವರವಾಗಿ ವಿವರಿಸಿದರು. ಚೆಟ್ಟಳ್ಳಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷÀ ಪೇರಿಯನ ಪಿ. ಜಯಾನಂದÀ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಚೆಟ್ಟಳ್ಳಿ ಪ್ರೌಢಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಸೋಮಯಂಡ ದಿಲೀಪ್ ಅಪ್ಪಚ್ಚು, ಕಟ್ಟೆಮನೆ ಲಕ್ಷ್ಮಣ ಹಾಜರಿದ್ದರು. ಚೆಟ್ಟಳ್ಳಿ ಪ್ರೌಢಶಾಲಾ ಮಕ್ಕಳಿಂದ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಪ್ರಭಾರ ಮುಖ್ಯೋಪಾಧ್ಯಾಯ ಜಿ.ಸಿ. ಸತ್ಯನಾರಾಯಣ ಸ್ವಾಗತಿಸಿ, ಶಿಕ್ಷಕಿ ಯು. ಸುನಂದ ನಿರೂಪಿಸಿ, ಮರುಳಿದರ ಕಟ್ಟೆಮನೆ ವಂದಿಸಿದರು.
ಹಳೆಯ ವಿದ್ಯಾರ್ಥಿಗಳು ಚೆಟ್ಟಳ್ಳಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿದ ಪಿ.ಜಿ. ಅಂಬೆಕಲ್, ವೈರಮುಡಿ, ಪೂಳಂಡ ಮಾಚಯ್ಯ ಹಾಗೂ ಕುಶಾಲಪ್ಪ ಅವರನ್ನು ಸನ್ಮಾನಿಸಿದರು.