ನಾಪೆÇೀಕ್ಲು, ಮಾ. 6: ನಾಪೆÇೀಕ್ಲು ಪಟ್ಟಣದಿಂದ ಅಜ್ಜಿಮುಟ್ಟ, ಬಾಳೆಯಡ ಮನೆಗಾಗಿ ಕಾರುಗುಂದಕ್ಕೆ ಸಾಗುವ ಸಂಪರ್ಕ ರಸ್ತೆಯನ್ನು ನಿರ್ಮಿಸಿದರೆ ಸುಮಾರು 28 ಗ್ರಾಮದ ಜನರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಸಂಸದರು, ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಕ್ರಮಕೈಗೊಳ್ಳಬೇಕೆಂದು ನಾಪೆÇೀಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮತ್ತು ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿದ ಅವರು ಈ ರಸ್ತೆಗೆ ಬಾಳೆಯಡ ಮನೆಯ ಬಳಿಯ ಕಾವೇರಿ ನದಿಗೆ ಸೇತುವೆಯನ್ನು ನಿರ್ಮಿಸಿದರೆ, ನಾಪೆÇೀಕ್ಲುವಿನಿಂದ ಕಾರುಗುಂದ ಮತ್ತು ಭಾಗಮಂಡಲಕ್ಕೆ 10 ಕಿ.ಮೀ ಅಂತರ ಕಡಿಮೆಯಾಗುತ್ತದೆ. ಇದರಿಂದ ಎರಡು ಗ್ರಾಮದ ಜನರಿಗೆ ಉಪಯುಕ್ತವಾಗುವದಲ್ಲದೆ ತಮ್ಮ ಕೆಲಸ ಕಾರ್ಯಗಳಿಗೆ ಹೋಗಿ ಬರಲು ಒಳ್ಳೆಯದಾಗುತ್ತದೆ ಎಂದ ಅವರು, ಕಾರುಗುಂದ ಮತ್ತು ಚೇರಂಬಾಣೆಯ ಜನರು ವೀರಾಜಪೇಟೆಗೆ ತೆರಳಲು ಸುತ್ತಿ ಬಳಸಿ ಬರಬೇಕಿದ್ದು, ಈ ರಸ್ತೆ ನಿರ್ಮಾಣವಾದರೆ, ಸಾರ್ವಜನಿಕರಿಗೆ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಲಿದೆ. ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದ್ದಾರೆ.