ಕುಶಾಲನಗರ, ಮಾ. 6: ದುಪ್ಪಟ್ಟು ಹಣ ಗಳಿಸುವ ಆಸೆ ತೋರಿಸಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಶ್ಚರ್ಯಕರ ಹಾಗೂ ಸ್ಪೋಟಕ ಮಾಹಿತಿಗಳು ಹೊರಬೀಳುತ್ತಿರುವುದು ಕಂಡುಬಂದಿದೆ. ಕುಶಾಲನಗರವನ್ನು ಕೇಂದ್ರವಾಗಿಸಿಕೊಂಡು 7 ಜನರ ತಂಡವೊಂದು ನಕಲಿ ವೆಬ್‍ಸೈಟ್ ಮೂಲಕ ನೂತನ ತಂತ್ರಜ್ಞಾನದೊಂದಿಗೆ ಕೋಟ್ಯಾಂತರ ಹಣ ಹೂಡಿಕೆ ಮಾಡಿ ವಂಚಿಸಿರುವುದು ಬೆಳಕಿಗೆ ಬಂದಿದ್ದು ಈಗಾಗಲೆ ತಂಡದ ಮೂವರನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದರೆ ಉಳಿದಂತೆ 4 ಮಂದಿ ಕಿಂಗ್‍ಪಿನ್‍ಗಳು ತಲೆ ತಪ್ಪಿಸಿಕೊಂಡಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಶೈಲೇಂದ್ರ ನೇತೃತ್ವದಲ್ಲಿ ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಮತ್ತು ಕುಶಾಲನಗರ ಠಾಣಾಧಿಕಾರಿ ವೆಂಕಟರಮಣ ಅವರುಗಳು ತನಿಖೆ ನಡೆಸುತ್ತಿದ್ದು ಪ್ರಮುಖ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಬಂಧಿಸಿದ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕುಶಾಲನಗರದ ಮೈಸೂರು ರಸ್ತೆಯಲ್ಲಿರುವ ಬಿಎಸ್‍ಎಂ ಯಮಹಾ ಶೋರೂಂ ಮಾಲೀಕ ಬಿ.ಎಸ್.ಮಂಜುನಾಥ ಮತ್ತು ಶಶಿಕಾಂತ್ ಎಂಬವರುಗಳ ಮಾರ್ಗದರ್ಶನದಲ್ಲಿ ಈ ವಂಚನಾ ಜಾಲ ಕಳೆದ ಕೆಲವು ತಿಂಗಳಿನಿಂದ ಕುಶಾಲನಗರದಲ್ಲಿ ಪ್ರಾರಂಭಗೊಂಡಿದೆ. ಉಳಿದಂತೆ ಕುಶಾಲನಗರದ ಶ್ರೀಕಾಂತ್, ಜಾನ್, ಡ್ಯಾನಿ, ಮರೂರು ಚೇತನ್, ವೀರಾಜಪೇಟೆಯ ಪ್ರಧಾನ ಎಂಬವರುಗಳು ಈ ವಂಚನೆ ಜಾಲದ ಪ್ರಮುಖರಾಗಿದ್ದು ಹಲವು ಏಜೆಂಟರ ಮೂಲಕ ಭಾರೀ ಕುಳಗಳನ್ನು (ಮೊದಲ ಪುಟದಿಂದ) ಹುಡುಕಿ ಈ ಮೂಲಕ ಹಣ ಹೂಡಿಕೆ ಮಾಡುವ ಹುನ್ನಾರ ನಡೆಸಿದ್ದಾರೆ.

ಒಟ್ಟು 29 ಸಾವಿರ ಖಾತೆಗಳನ್ನು ಹೊಂದಿದ ವೆಬ್‍ಸೈಟ್ ಕುಶಾಲನಗರ ಮತ್ತು ಇತರೆ ಭಾಗಗಳ ಸುಮಾರು 3800 ಮಂದಿ ಹೂಡಿಕೆದಾರರು ತಮ್ಮ ಹೆಸರಿನಲ್ಲಿ ತಲಾ ಲಕ್ಷಾಂತರ ಹಣ ಹೂಡಿಕೆ ಮಾಡಿ ದುಪ್ಪಟ್ಟು ಹಣ ಪಡೆದಿರುವುದು ಬೆಳಕಿಗೆ ಬಂದಿದೆ. ಈ ಲಾಭದ ಆಸೆಯಿಂದ ಇದೇ ಹೂಡಿಕೆದಾರರು ಬೇನಾಮಿ ಹೆಸರಿನಲ್ಲಿ ಖಾತೆಗಳನ್ನು ತೆರೆದಿರುವುದು ತನಿಖೆಯಿಂದ ದೃಢಪಟ್ಟಿದೆ. ಕುಶಾಲನಗರದ ರಥಬೀದಿಯ ಓರ್ವ ಉದ್ಯಮಿ ಲಾಭದ ಆಸೆ ಕಂಡು ಕೊನೆಗೆ ಸುಮಾರು 40 ಲಕ್ಷದಷ್ಟು ಗರಿಷ್ಠ ಮೊತ್ತದ ಹಣ ಹೂಡಿಕೆ ಮಾಡಿರುವುದಾಗಿ ಗುಸುಗುಸು ಕೇಳಿಬರುತ್ತಿದೆ. ಹಣ ಹೂಡಿಕೆ ಮಾಡಿದ ಮಡಿಕೇರಿಯ ವ್ಯಕ್ತಿಯೊಬ್ಬರು ಪೊಲೀಸ್ ಇಲಾಖೆ ನೀಡಿದ ದೂರಿನ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಅವರ ಸೂಚನೆಯಂತೆ ತನಿಖೆಯಿಂದ ಈ ಭಾರೀ ಪ್ರಮಾಣದ ವಂಚನೆ ಪ್ರಕರಣ ಬಹಿರಂಗಗೊಂಡಿದ್ದು ಜಿಲ್ಲಾ ಅಪರಾಧ ಪತ್ತೆದಳ, ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್, ಸ್ಥಳೀಯ ಪೊಲೀಸ್ ತನಿಖಾ ತಂಡದ ಸಿಬ್ಬಂದಿಗಳು ಬಂಧನಕ್ಕೊಳಗಾದ ಆರೋಪಿಗಳೊಂದಿಗೆ ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಬೆಂಗಳೂರಿನ ಯಶವಂತಪುರಕ್ಕೆ ತೆರಳಿ ವೆಬ್‍ಸೈಟ್ ನಿರ್ಮಿಸಿದ ಟೆಕ್ನಿಷಿಯನ್ ಪತ್ತೆಹಚ್ಚಿ ಆತನಿಂದ ಮಾಹಿತಿ ಕಲೆಹಾಕಿದ್ದಾರೆ. ಈ ನಡುವೆ ಖಚಿತ ಮಾಹಿತಿ ಮೇರೆಗೆ ‘ಶಕ್ತಿ’ ಸ್ಫೋಟಕ ವರದಿಯನ್ನು ಪ್ರಕಟಿಸಿದ ಬೆನ್ನಲ್ಲೇ ದಂಧೆ ವಿಷಯ ಬಹಿರಂಗಗೊಂಡು ಪೊಲೀಸರು ಕೂಡ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದರು.

ಮಾಹಿತಿ ಪ್ರಕಾರ ಓರ್ವ ವ್ಯಕ್ತಿ ಈ ವಂಚನೆ ವೆಬ್‍ಸೈಟ್ ಮೂಲಕ ಕನಿಷ್ಟ 12 ಸಾವಿರ ಹೂಡಿಕೆ ಮಾಡಿದಲ್ಲಿ ಪ್ರತಿ ವಾರ ದುಪ್ಪಟ್ಟು ಹಣ ಹೂಡಿಕೆದಾರನ ಖಾತೆಗೆ ನಿರಂತರವಾಗಿ ಜಮಾ ಆಗುತ್ತದೆ. ಪ್ರಾರಂಭದಲ್ಲಿ ಹೂಡಿಕೆ ಮಾಡಿದ ಕುಶಾಲನಗರದ ಬಹುತೇಕ ಮಂದಿಗೆ ಲಕ್ಷಾಂತರ ಮೊತ್ತದ ಹಣ ದೊರಕಿದೆ. ಇದರಲ್ಲಿ ಬಹುತೇಕ ಅಧಿಕಾರಿಗಳ, ಸರಕಾರಿ ನೌಕರರ ಪಾಲೇ ಹೆಚ್ಚು ಎನ್ನಲಾಗಿದೆ. ಕೊನೆಯ ಹಂತದಲ್ಲಿ ಹಣ ಹೂಡಿಕೆ ಮಾಡಿದ ಬಡಪಾಯಿಗಳು ಮತ್ತು ಅತಿಯಾಸೆಯಿಂದ ಹಣದ ಹಿಂದೆ ಬಿದ್ದ ಗ್ರಾಹಕರು ಇದೀಗ ತಮ್ಮ ಹೂಡಿಕೆ ಹಣ ದೊರೆಯದೆ ತಲೆಗೆ ಕೈಹೊತ್ತು ಕುಳಿತಿರುವುದು ಸಾಮಾನ್ಯ ವಿಷಯವಾಗಿದೆ. ದುಪ್ಪಟ್ಟು ಹಣ ದೊರೆತ ಕೆಲವರು ಆಸೆಗೆ ಬಲಿಬಿದ್ದು ಬೇನಾಮಿ ಹೆಸರಲ್ಲಿ ಹಣ ಹೂಡಿಕೆ ಮಾಡಿರುವುದು ಕೂಡ ಕಂಡುಬಂದಿದೆ.

ಇಲ್ಲಿ ವಿಶೇಷವೆಂದರೆ ಬಹುತೇಕ ಹಲವು ಇಲಾಖೆಗಳ ಅಧಿಕಾರಿಗಳು, ನೌಕರರು, ಗಣ್ಯ ವ್ಯಕ್ತಿಗಳೆಂದುಕೊಂಡವರು ಈ ದಂಧೆಯಲ್ಲಿ ಲಕ್ಷಾಂತರ ಹಣ ಹೂಡಿಕೆ ಮಾಡಿರುವುದು ಆಶ್ಚರ್ಯಕರ ವಿಷಯವಾಗಿದ್ದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಕೆಲವು ಪೊಲೀಸರು, ಅಧಿಕಾರಿಗಳು ದಂಧೆಯಲ್ಲಿ ತೊಡಗಿಸಿಕೊಂಡು ದುಪ್ಪಟ್ಟು ಹಣ ಹೂಡಿಕೆ ಮಾಡಿ ದುಪ್ಪಟ್ಟು ಪಡೆದುಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ.

ಕಾನೂನು ಕಾಪಾಡಬೇಕಾದವರೆ ದಂಧೆಯನ್ನು ಪ್ರೋತ್ಸಾಹಿಸುವುದರೊಂದಿಗೆ ದಂಧೆಯಲ್ಲಿ ಕೈಜೋಡಿಸಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ ಎಂದರೆ ತಪ್ಪಾಗಲಾರದು. ಈ ದಂಧೆಯಲ್ಲಿ ತೊಡಗಿಸಿಕೊಂಡ ಕೆಲವು ಊರು ಬಿಟ್ಟು ಪರಾರಿಯಾಗಿರುವ ಮಾಹಿತಿಗಳು ಇದೀಗ ಬೆಳಕಿಗೆ ಬಂದಿದೆ. ರಸೂಲ್ ಬಡಾವಣೆಯ ವ್ಯಕ್ತಿಯೊಬ್ಬ ತನ್ನ ಮನೆಯನ್ನು ಲೀಸ್‍ಗೆ ನೀಡಿ ಈ ದಂಧೆಯಲ್ಲಿ ಹಣ ಹೂಡಿಕೆ ಮಾಡಿದ್ದ. ಇನ್ನೋರ್ವ ಕೊಪ್ಪ ಗ್ರಾಮದ ಹಣಕಾಸು ಸಂಸ್ಥೆಯಲ್ಲಿದ್ದ ಯುವಕನೊಬ್ಬ ಕೈಸುಟ್ಟುಕೊಂಡು ಊರು ಬಿಟ್ಟಿರುವುದಾಗಿ ಮಾಹಿತಿಗಳು ಹೊರಬಿದ್ದಿವೆ.

ಕೆಲವು ಸಂಘಸಂಸ್ಥೆಗಳ ಪ್ರಮುಖರು ಕೂಡ ದಂಧೆಯಲ್ಲಿ ತಮ್ಮನ್ನು ಹೂಡಿಕೆದಾರನ ಖಾತೆಗೆ ನಿರಂತರವಾಗಿ ಜಮಾ ಆಗುತ್ತದೆ. ಪ್ರಾರಂಭದಲ್ಲಿ ಹೂಡಿಕೆ ಮಾಡಿದ ಕುಶಾಲನಗರದ ಬಹುತೇಕ ಮಂದಿಗೆ ಲಕ್ಷಾಂತರ ಮೊತ್ತದ ಹಣ ದೊರಕಿದೆ. ಇದರಲ್ಲಿ ಬಹುತೇಕ ಅಧಿಕಾರಿಗಳ, ಸರಕಾರಿ ನೌಕರರ ಪಾಲೇ ಹೆಚ್ಚು ಎನ್ನಲಾಗಿದೆ. ಕೊನೆಯ ಹಂತದಲ್ಲಿ ಹಣ ಹೂಡಿಕೆ ಮಾಡಿದ ಬಡಪಾಯಿಗಳು ಮತ್ತು ಅತಿಯಾಸೆಯಿಂದ ಹಣದ ಹಿಂದೆ ಬಿದ್ದ ಗ್ರಾಹಕರು ಇದೀಗ ತಮ್ಮ ಹೂಡಿಕೆ ಹಣ ದೊರೆಯದೆ ತಲೆಗೆ ಕೈಹೊತ್ತು ಕುಳಿತಿರುವುದು ಸಾಮಾನ್ಯ ವಿಷಯವಾಗಿದೆ. ದುಪ್ಪಟ್ಟು ಹಣ ದೊರೆತ ಕೆಲವರು ಆಸೆಗೆ ಬಲಿಬಿದ್ದು ಬೇನಾಮಿ ಹೆಸರಲ್ಲಿ ಹಣ ಹೂಡಿಕೆ ಮಾಡಿರುವುದು ಕೂಡ ಕಂಡುಬಂದಿದೆ.

ಇಲ್ಲಿ ವಿಶೇಷವೆಂದರೆ ಬಹುತೇಕ ಹಲವು ಇಲಾಖೆಗಳ ಅಧಿಕಾರಿಗಳು, ನೌಕರರು, ಗಣ್ಯ ವ್ಯಕ್ತಿಗಳೆಂದುಕೊಂಡವರು ಈ ದಂಧೆಯಲ್ಲಿ ಲಕ್ಷಾಂತರ ಹಣ ಹೂಡಿಕೆ ಮಾಡಿರುವುದು ಆಶ್ಚರ್ಯಕರ ವಿಷಯವಾಗಿದ್ದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಕೆಲವು ಪೊಲೀಸರು, ಅಧಿಕಾರಿಗಳು ದಂಧೆಯಲ್ಲಿ ತೊಡಗಿಸಿಕೊಂಡು ದುಪ್ಪಟ್ಟು ಹಣ ಹೂಡಿಕೆ ಮಾಡಿ ದುಪ್ಪಟ್ಟು ಪಡೆದುಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ.

ಕಾನೂನು ಕಾಪಾಡಬೇಕಾದವರೆ ದಂಧೆಯನ್ನು ಪ್ರೋತ್ಸಾಹಿಸುವುದರೊಂದಿಗೆ ದಂಧೆಯಲ್ಲಿ ಕೈಜೋಡಿಸಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ ಎಂದರೆ ತಪ್ಪಾಗಲಾರದು. ಈ ದಂಧೆಯಲ್ಲಿ ತೊಡಗಿಸಿಕೊಂಡ ಕೆಲವು ಊರು ಬಿಟ್ಟು ಪರಾರಿಯಾಗಿರುವ ಮಾಹಿತಿಗಳು ಇದೀಗ ಬೆಳಕಿಗೆ ಬಂದಿದೆ. ರಸೂಲ್ ಬಡಾವಣೆಯ ವ್ಯಕ್ತಿಯೊಬ್ಬ ತನ್ನ ಮನೆಯನ್ನು ಲೀಸ್‍ಗೆ ನೀಡಿ ಈ ದಂಧೆಯಲ್ಲಿ ಹಣ ಹೂಡಿಕೆ ಮಾಡಿದ್ದ. ಇನ್ನೋರ್ವ ಕೊಪ್ಪ ಗ್ರಾಮದ ಹಣಕಾಸು ಸಂಸ್ಥೆಯಲ್ಲಿದ್ದ ಯುವಕನೊಬ್ಬ ಕೈಸುಟ್ಟುಕೊಂಡು ಊರು ಬಿಟ್ಟಿರುವುದಾಗಿ ಮಾಹಿತಿಗಳು ಹೊರಬಿದ್ದಿವೆ.

ಕೆಲವು ಸಂಘಸಂಸ್ಥೆಗಳ ಪ್ರಮುಖರು ಕೂಡ ದಂಧೆಯಲ್ಲಿ ತಮ್ಮನ್ನು ಹಲವು ವಂಚಕರು ಕುಶಾಲನಗರದ ಕೆಲವು ಕಿಂಗ್ ಪಿನ್‍ಗಳ ಮೂಲಕ ಏಜೆಂಟ್ ಕೆಲಸ ಮಾಡಿಸಿಕೊಂಡು ನೂರಾರು ಕೋಟಿ ಹಣ ವಂಚನೆ ಮಾಡಿ ಕಾಲ್ಕಿತ್ತಿದ್ದಾರೆ. ಅದರಲ್ಲಿ ಹಿಂದೂಸ್ಥಾನ ಇನ್ಫ್ರಾಕಾನ್, ಗ್ರೀನ್ ಬಡ್ಸ್ ಈ ರೀತಿ ಕೆಲವು ಏಜೆಂಟರು ವಂಚನೆ ಜಾಲವನ್ನು ಕುಶಾಲನಗರದಲ್ಲಿ ಹಣ ಹೂಡಿಕೆ ಮಾಡುವಂತೆ ಪ್ರಚೋದಿಸಿ ಸಾವಿರಾರು ಅಮಾಯಕರಿಗೆ ನೂರಾರು ಕೋಟಿ ವಂಚನೆ ಮಾಡಿ ಕಾಲ್ಕಿತ್ತಿರುವುದು ಹಸಿರಾಗಿರುವಾಗಲೇ ಇದೀಗ ಈ ವೆಬ್‍ಸೈಟ್ ಕ್ಯಾಪಿಟಲ್ ರಿಲೇಷನ್‍ಶಿಪ್.ಇನ್ ಸೇರ್ಪಡೆಗೊಂಡಿರುವುದು ಆತಂಕಕಾರಿ ಬೆಳವಣಿಗೆ ಎಂದರೆ ತಪ್ಪಾಗಲಾರದು. ಇಂತಹ ನಕಲಿ ಸ್ಕೀಂ ದಂಧೆಯಲ್ಲಿ ತೊಡಗಿಸಿಕೊಂಡ ಕೆಲವು ಏಜೆಂಟರು ಕುಶಾಲನಗರ ಸೇರಿದಂತೆ ಸುತ್ತಮುತ್ತ ಐಷಾರಾಮಿ ಜೀವನದಲ್ಲಿ ತೊಡಗಿಸಿಕೊಂಡಿರುವುದು ಮಾತ್ರ ಆಶ್ಚರ್ಯಕರ ಬೆಳವಣಿಗೆ ಎಂದರೆ ತಪ್ಪಾಗಲಾರದು. ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದ ಕಾನೂನು ಪಾಲಕರೇ ಈ ದಂಧೆಯಲ್ಲಿ ವಂಚಕರೊಂದಿಗೆ ಕೈಜೋಡಿಸಿರುವುದು ಈ ಬೆಳವಣಿಗೆಗೆ ಕಾರಣ ಎನ್ನುತ್ತಾರೆ ಸಾರ್ವಜನಿಕರು.

ಅಕ್ರಮವಾಗಿ ಹಣ ಹೂಡಿಕೆ ಮಾಡುವುದು ನಿಯಮಕ್ಕೆ ವಿರುದ್ಧವಾಗಿದ್ದು ನಕಲಿ ವೆಬ್‍ಸೈಟ್ ವಂಚನೆ ಪ್ರಕರಣದಲ್ಲಿ ಹಣ ಹೂಡಿಕೆ ಮಾಡಿದ ಗ್ರಾಹಕರ ಮೇಲೂ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುತ್ತದೆ ಎಂದು ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಅವರು ತಿಳಿಸಿದ್ದು ಅಕ್ರಮ ಚಟುವಟಿಕೆಗಳಲ್ಲಿ ಯಾರೇ ಹಣ ತೊಡಗಿಸಿದರೂ ಅವರ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ನಕಲಿ ವೆಬ್‍ಸೈಟ್‍ಪ್ರಕರಣದ ರೂವಾರಿ ಮಂಜುನಾಥ ಕೇರಳಕ್ಕೆ ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದು ವಿಶೇಷ ತಂಡವನ್ನು ರಚಿಸಿ ಉಳಿದ ಆರೋಪಿಗಳನ್ನು ಬಂಧಿಸುವುದಾಗಿ ಮಹೇಶ್ ಅವರು ಶಕ್ತಿಗೆ ತಿಳಿಸಿದ್ದಾರೆ.