ಮಡಿಕೇರಿ, ಮಾ. 6 : ದಾವಣಗೆರೆ ಶರಣ ಮಾಗನೂರು ಬಸಪ್ಪನವರ ಪ್ರತಿಷ್ಠಾನವು ಸಾಹಿತ್ಯ ಚಟುವಟಿಕೆಗೆಗೆ ನೀಡುವ ರೂ.1 ಲಕ್ಷ ವೆಚ್ಚದ ದತ್ತಿಯು 2020 ರ ಸಾಲಿನಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಲಭಿಸಿದೆ.
ಕೋಲಾರದ ಶ್ರೀ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೋಲಾರ, ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕೋಲಾರ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಗಡಿನಾಡಲ್ಲಿ ಸಂಸ್ಕøತಿ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶರಣ ಸಾಹಿತ್ಯ ಪರಿಷತ್ತಿನ ರಾಷ್ಟ್ರಾಧ್ಯಕ್ಷ ಗೊರೂರು ಚನ್ನಬಸಪ್ಪ ಅವರು ದತ್ತಿಯ ರೂ. 1 ಲಕ್ಷ ದ ಚೆಕ್ ಅನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಅವರಿಗೆ ಹಸ್ತಾಂತರಿಸಿದರು.
ಜಿಲ್ಲೆಯಲ್ಲಿ ಕನ್ನಡ ಸಂಸ್ಕøತಿ ಕಾರ್ಯಕ್ರಮ ಆಯೋಜನೆ ಹಾಗೂ ಶರಣರ ಉಪನ್ಯಾಸದ ಬಗ್ಗೆ ದತ್ತಿ ನಡೆಸುವಂತೆ ರೂ. ಒಂದು ಲಕ್ಷ ರೂಗಳ ಚೆಕ್ ಅನ್ನು ನೀಡಲಾಯಿತು. ಇದೇ ಸಂದರ್ಭ ಕೊಡಗು ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಅವರನ್ನು ಸನ್ಮಾನಿಸಲಾಯಿತು. ತೇಜೇಶಲಿಂಗ ಶಿವಾಚರ್ಯ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಈ ಸಂದರ್ಭ ಕೋಲಾರ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ನಾಗಾನಂದ ಕೆಂಪರಾಜ್, ದಾವಣಗೆರೆ ಕಸಾಪ ಅಧ್ಯಕ್ಷ ಡಾ.ಹೆಚ್.ಎಸ್. ಮಂಜುನಾಥ ಮೂರ್ತಿ, ಕೋಲಾರ ಜಿ.ಪಂ. ಅಧ್ಯಕ್ಷ ಸಿ.ಎಸ್. ವೆಂಕಟೇಶ್, ದಾವಣಗೆರೆ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾ ನದ ಅಧ್ಯಕ್ಷ ಎಂ.ಬಿ. ಸಂಗಮೇಶ ಗೌಡರು, ಮತ್ತಿತರರು ಇದ್ದರು.