*ಗೋಣಿಕೊಪ್ಪಲು, ಮಾ. 1: ಕೊಡಗು ಜಾಂಬವ ಯುವಸೇನೆ ಶಿವರಾತ್ರಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಮೊದಲ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದ ಚಾಂಪಿಯನ್ ಆಗಿ ಪೆÇನ್ನಂಪೇಟೆ ಪ್ರತಿಭಾ ಕ್ರಿಕೆಟರ್ಸ್ ತಂಡ ಹೊರಹೊಮ್ಮಿದೆ. ವೈ.ಸಿ.ಪಿ. ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಪೆÇನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಮೂರು ದಿನಗಳ ಕ್ರಿಕೆಟ್ ಪಂದ್ಯಾಟದಲ್ಲಿ 16 ತಂಡಗಳನ್ನು ಮಣಿಸಿ ಪೆÇನ್ನಂಪೇಟೆಯ ಪ್ರತಿಭಾ ತಂಡ ಜಾಂಬವ ಕ್ರಿಕೆಟ್ ಕಪ್‍ಅನ್ನು ತನ್ನ ಮುಡಿಗೇರಿಸಿಕೊಂಡು ಟ್ರೋಫಿ ಮತ್ತು ರೂ. 22,222 ನಗದು ಪಡೆದು ಕೊಂಡಿದೆ. ರನ್ನರ್ಸ್ ತಂಡ ಟ್ರೋಫಿಯೊಂದಿಗೆ ರೂ. 11,111ಗೆ ತೃಪ್ತಿಹೊಂದಿದೆ. ಆಯೋಜಕರು ವಿಶೇಷವಾಗಿ ತಂಡದಲ್ಲಿ ಮೂರನೇ ಸ್ಥಾನ ಪಡೆದ ಲಯನ್ಸ್ ಕ್ರಿಕೆಟರ್ಸ್ ತಂಡಕ್ಕೂ ರೂ. 3,333 ನಗದು ಹಾಗೂ ಟ್ರೋಫಿ ನೀಡಿ ಪೆÇ್ರೀತ್ಸಾಹ ನೀಡಿದೆ.

ಯುವಕರಲ್ಲಿನ ಸದೃಢತೆಗಾಗಿ ಜಾಂಬವ ಯುವಸೇನೆ ಮೊದಲ ವರ್ಷದ ಕ್ರಿಕೆಟ್ ಪಂದ್ಯಾಟವನ್ನು ನಡೆಸಲು ಮುಖ್ಯ ಕಾರಣವಾಗಿದೆ. ಈ ಮೂಲಕ ಯುವಕರಲ್ಲಿನ ಒಗ್ಗಟ್ಟು ಕಾಪಾಡಿಕೊಳ್ಳುವುದು ಜೊತೆಗೆ ಯುವಕರು ದುಶ್ಚಟಗಳಿಗೆ ಬಲಿಯಾಗದೆ ಕ್ರೀಡಾಮನೋಭಾವವನ್ನು ಬೆಳೆಸಿಕೊಳ್ಳುವ ಉದ್ದೇಶ ಈ ಪಂದ್ಯಾಟದ್ದಾಗಿದೆ ಎಂದು ಜಿಲ್ಲಾ ಜಾಂಬವ ಯುವ ಸೇನೆ ಅಧ್ಯಕ್ಷ ಸಿಂಗಿ ಸತೀಶ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸಮಾರೋಪ ಸಮಾರಂಭದಲ್ಲಿ ಪೆÇನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸುಮಿತ್ರಾ, ಸದಸ್ಯ ಅಮ್ಮತ್ತೀರ ಸುರೇಶ್, ಪೆÇನ್ನಂಪೇಟೆ ಎ.ಪಿ.ಎಂ.ಸಿ. ಅಧ್ಯಕ್ಷ ಮುದ್ದಿಯಡ ಮಂಜು ಗಣಪತಿ, ಮಾಜಿ ಸೈನಿಕ ರಮೇಶ್, ತಿತಿಮತಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಪಾರ್ವತಿ, ಪೆÇನ್ನಂಪೇಟೆ ಬಿಜೆಪಿ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಸಿರಾಜ್ ಬೇಗ್, ಜಾಂಬವ ಯುವ ಸೇನೆ ತಾಲೂಕು ಅಧ್ಯಕ್ಷ ಹೆಚ್.ಎನ್. ರವಿ, ಉಪಾಧ್ಯಕ್ಷ ಎಸ್. ಶ್ರೀನಿವಾಸ್, ಉಪಾಧ್ಯಕ್ಷ ಸಂತೋಷ್ ಹೆಚ್.ಕೆ, ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಮಹೇಶ್, ಗೌರವಾಧ್ಯಕ್ಷ ಹೆಚ್.ವಿ. ಗಣೇಶ್, ಕ್ರೀಡಾ ಸಲಹೆಗಾರ ಹೆಚ್.ಎನ್. ಅರುಣ ಉಪಸ್ಥಿತರಿದ್ದರು.