ಸುಂಟಿಕೊಪ್ಪ, ಮಾ. 1: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರು ಹಲ್ಲೆ ಮಾಡಿ ಕತ್ತಿಯಿಂದ ಕಡಿದ ಪರಿಣಾಮ ಯುವಕನೋರ್ವ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ. ಸುಂಟಿಕೊಪ್ಪ ಸಮೀಪದ ಹರದೂರಿನ ಮಲ್ಲಿ ಕಾರ್ಜುನ ಕಾಲೋನಿಯ ಅಣ್ಣು ಎಂಬವರ ಮಗ ದಿನೇಶ್ ಎಂಬಾತ ಇಂದು ಮಧ್ಯಾಹ್ನ ಪಕ್ಕದ ಮನೆಯವರಾದ ಓಬಯ್ಯ ಎಂಬವರ ಕೋಳಿಗೆ ಕಲ್ಲೆಸೆದಿದ್ದ ಎನ್ನಲಾಗಿದೆ.ಇದನ್ನು ಓಬಯ್ಯ ಅವರು ದಿನೇಶನ ಬಳಿ ಪ್ರಶ್ನಿಸಿದ್ದಾರೆ. ಇದರಿಂದ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತ ತಲುಪಿದೆ. ಪರಿಸ್ಥಿತಿ ವಿಕೋಪ ಕ್ಕೆ ಹೋಗಿದ್ದರಿಂದ ಓಬಯ್ಯ ಕತಿ ್ತಯಿಂದ ದಿನೇಶನ ಮೇಲೆ ಹಲ್ಲೆ ಮಾಡಿ ಆತನ ಹೊಟ್ಟೆ ಭಾಗಕ್ಕೆ ಕಡಿದಿದ್ದು; ದಿನೇಶ ತೀವ್ರ ಗಾಯದಿಂದ ಚಿಂತಾಜನಕ ಸ್ಥಿತಿಯಲ್ಲಿ ಮೈಸೂರು ಆಸ್ಪತ್ರೆಗೆ ಸಾಗಿಸಲ್ಪಟ್ಟಿದ್ದಾರೆ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಓಬಯ್ಯನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ.
-ಕ್ಯೂಟ್ ಕೂರ್ಗ್ ನ್ಯೂಸ್