ಗೋಣಿಕೊಪ್ಪ ವರದಿ, ಮಾ. 1: ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದಿಂದ ಡಿಜಿಟಲ್ ಸಿಗ್ನಲ್ ಪೆÇ್ರಸೆಸಿಂಗ್ ಮತ್ತು ಮ್ಯಾಟ್ಲ್ಯಾಬ್ ಬಳಸಿ ‘ಮೆಷಿನ್ ಲರ್ನಿಂಗ್’ ಪರಿಚಯ ಎಂಬ ವಿಷಯಗಳ ಬಗ್ಗೆ 6 ಮತ್ತು 8ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಮೈಸೂರು ಎಲ್ ಆ್ಯಂಡ್ ಟಿ ಟೆಕ್ನಾಲಜಿ ಪ್ರಾಜೆಕ್ಟ್ ಮ್ಯಾನೇಜರ್ ಡಾ. ಶ್ರೀಕಾಂತ್, ಟೆಕ್ನಾಲಜಿ ಸರ್ವಿಸಸ್ ಸೀನಿಯರ್ ಇಂಜಿನಿಯರ್ ಅರುಣ್ ಕುಮಾರ್ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥ ಡಾ. ಎಸ್.ಎಸ್ ದಿವಾಕರ ಮಾತನಾಡಿ, ಮ್ಯಾಟ್ಲ್ಯಾಬ್ ಮತ್ತು ಸಿಮ್ಯುಲಿಂಕ್ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭ ಪ್ರಾಂಶುಪಾಲೆ ಪಿ.ಸಿ. ಕವಿತ, ಕೊಡವ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಸಿ.ಪಿ. ರಾಕೇಶ್ ಪೂವಯ್ಯ ಇದ್ದರು.