ನಾಪೆÇೀಕ್ಲು, ಫೆ. 28: ಇತಿಹಾಸ ಪ್ರಸಿದ್ಧ ಎಮ್ಮೆಮಾಡು ವಾರ್ಷಿಕ ಉರೂಸ್‍ಗೆ ಸಯ್ಯಿದ್ ಲಿಯಾವುಲ್ ಮುಸ್ತಫ ಹಾಮಿದ್ ಕೊಯಮ್ಮ ತಂಞಳ್ ಮಾಟೂಲ್ ಅವರ ನೇತೃತ್ವದಲ್ಲಿ ಎಮ್ಮೆಮಾಡು ಜಮಾಅತ್ ಅಧ್ಯಕ್ಷ ಕೆ.ಎಸ್. ಅಬ್ದುಲ್ ಖಾದರ್ ಹಾಜಿ ಧ್ವಜಾರೋಹಣ ನೆರವೇರಿಸುವದರ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.ಶುಕ್ರವಾರದ ಪ್ರಾರ್ಥನೆಯ ಬಳಿಕ ಸೂಫಿ ಶಾಯಿದ್ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಧ್ವಜಾರೋಹಣ ನೆರವೇರಿ¸ Àಲಾಯಿತು.ಈ ಸಂದರ್ಭದಲ್ಲಿ ಜಮಾಅತ್ ಪ್ರಧಾನ ಕಾರ್ಯದರ್ಶಿ ಪಿ.ಎ.ಇಬ್ರಾಹಿಂ ಸಅದಿ, ಉಪಾಧ್ಯಕ್ಷ ಸಿ.ಎಂ.ಅಬ್ದುಲ್ ಖಾದರ್, ಮತ್ತಿತರರು ಇದ್ದರು.