ಮಡಿಕೇರಿ, ಫೆ. 29:ಆತ್ಮಶ್ರೀ ಕನ್ನಡ ಸಾಂಸ್ಕøತಿಕ ಪ್ರತಿಷ್ಠಾನ ಮತ್ತು ಆತ್ಮಶ್ರೀ ಸಾಮಾಜಿಕ ಮತ್ತು ಸಾಂಸ್ಕøತಿಕ ಸಂಘದ ವತಿಯಿಂದ ‘ಯುಗಾದಿ ಪುರಸ್ಕಾರ 2020’ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಮಾರ್ಚ್ ತಿಂಗಳ 29 ರಂದು ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಕನ್ನಡ ನಾಡು, ನುಡಿ ಸೇವೆ, ರೈತ ಪರ ಹೋರಾಟ, ಪ್ರಗತಿಪರ ರೈತರು, ಸಮಾಜ ಸೇವಕರು, ವೈದ್ಯರು, ಶಿಕ್ಷಕರು, ಕ್ರೀಡಾಪಟುಗಳು ಮತ್ತಿತರ ಸಾಧಕರು ಇತ್ತೀಚಿನ ಒಂದು ಭಾವಚಿತ್ರದೊಂದಿಗೆ ಆತ್ಮಶ್ರೀ ಕನ್ನಡ ಸಾಂಸ್ಕøತಿಕ ಪ್ರತಿಷ್ಠಾನ (ರಿ), 674. 10ನೇ ಸಿ. ಕ್ರಾಸ್, 3ನೇ ಹಂತ, 4ನೇ ಬಡಾವಣೆ, ಬಸವೇಶ್ವರ ನಗರ, ಬೆಂಗಳೂರು-560079’ ಈ ವಿಳಾಸಕ್ಕೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಸಾಧಕರಿಗೆ ಪ್ರಶಸ್ತಿ ಪತ್ರ, ಫಲಕ ನೀಡುವುದರ ಜೊತೆಗೆ ಸನ್ಮಾನವನ್ನು ಕೂಡ ಏರ್ಪಡಿಸಲಾಗುವುದು. ಅರ್ಜಿ ಸಲ್ಲಿಸಲು ಮಾರ್ಚ್ 10 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗೆ ಮೊ. 9448260417, 8618038307 ಸಂಪರ್ಕಿಸಬಹುದೆಂದು ಆತ್ಮಶ್ರೀ ಕನ್ನಡ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ತಿಳಿಸಿದ್ದಾರೆ.