ಸುಂಟಿಕೊಪ್ಪ, ಫೆ. 28: ಕಾಫಿ ತುಂಬಿಸಿಕೊಂಡು ರಾಷ್ಟ್ರೀಯ ಹೆದ್ದಾರಿಯ 275 ರ 7ನೇ ಮೈಲು ರಸ್ತೆ ಬಳಿ ತೆರಳುತ್ತಿದ್ದ ಪಿಕ್ಅಫ್ ಚಾಲಕನ ನಿಯಂತ್ರಣ ತಪ್ಪಿ ಮಧ್ಯ ರಸ್ತೆಯಲ್ಲಿಯೇ ಪಲ್ಟಿಹೊಡೆದ ಪರಿಣಾಮ ಚಾಲಕ ಸೇರಿದಂತೆ ವಾಹನದಲ್ಲಿದ್ದ ಇಬ್ಬರಿಗೆ ಗಾಯವುಂಟಾದ ಘಟನೆ ನಡೆದಿದೆ.
ಕೆದಕಲ್ನಿಂದ ಪಿಕ್ಅಫ್ನಲ್ಲಿ (ಕೆಎ12 ಎ.7095) ಚಾಲಕ ಕಾಫಿಯನ್ನು ತುಂಬಿಸಿಕೊಂಡು ಸುಂಟಿಕೊಪ್ಪ ಕಡೆಗೆ ಬರುತ್ತಿದ್ದಾಗ 7ನೇ ಮೈಲು ಬಳಿ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯದಲ್ಲೇ ಪಲ್ಟಿ ಹೊಡೆದಿದ್ದಾರೆ. ಚಾಲಕ ಹಾಗೂ ವಾಹನದಲ್ಲಿದ್ದ ಕಾರ್ಮಿಕರಾದ ಶಂಕರ, ಶೇಖರ, ರಾಜು ಎಂಬವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.