ಕುಶಾಲನಗರ, ಫೆ. 29: ಹಿಂಸಾತ್ಮಕ ಚಟುವಟಿಕೆಯಲ್ಲಿ ತೊಡಗಿ, ದೇಶದಲ್ಲಿ ಅಶಾಂತಿ ವಾತಾವರಣ ಉಂಟು ಮಾಡುತ್ತಿರುವ ಪಿಎಫ್‍ಐ ಮತ್ತು ಎಸ್‍ಎಸ್ ಎಫ್ ಸಂಘಟನೆ ಗಳನ್ನು ತಕ್ಷಣವೇ ನಿಷೇಧಿಸಬೇಕೆಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ.

ಕುಶಾಲನಗರ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ನಡೆದ ಜನಜಾಗೃತಿ ಕಾರ್ಯಕ್ರಮದಲ್ಲಿ ಪಿಎಫ್‍ಐ ಮತ್ತು ಎಸ್‍ಎಸ್‍ಎಫ್ ಸಂಘಟನೆಗಳ ವಿರುದ್ಧ ಸಮಿತಿ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಕೆಲ ತಿಂಗಳುಗಳಿಂದ ಹೋರಾಟದ ಹೆಸರಿನಲ್ಲಿ ನಡೆಸುತ್ತಿರುವ ಈ ಸಂಘಟನೆಗಳಿಗೆ ಹಣದ ಮೂಲ ಯಾವುದು ಎನ್ನುವುದನ್ನು ಪತ್ತೆ ಹಚ್ಚಿ ಕೂಡಲೇ ಆ ವ್ಯವಸ್ಥೆಯನ್ನು ತಡೆಹಿಡಿಯ ಬೇಕೆಂದು ಒತ್ತಾಯಿಸಿದರು.

ಹಿಂದೂ ದೇಶದಲ್ಲಿ ಪಾಕಿಸ್ತಾನಕ್ಕೆ ಜೈ ಎನ್ನುವ ಹೆಣ್ಣು ಮಕ್ಕಳನ್ನು ಪೆÇೀಷಿಸುವ ಇಂತಹ ಸಂಘಟನೆಗಳು ಖಂಡಿತ ನಮ್ಮ ದೇಶದಲ್ಲಿ ಇರುವುದಕ್ಕೆ ಅವಕಾಶ ಕಲ್ಪಿಸಬಾರದು ಎಂದು ಹಿಂದೂ ಜನಜಾಗೃತಿ ಸಮಿತಿಯ ಪ್ರಮುಖ ಕೆ.ಶಿವರಾಂ ಆಗ್ರಹಿಸಿದರು.

ಕುಶಾಲನಗರ ಹಿಂದೂ ಜನಜಾಗೃತಿ ಸಮಿತಿಯ ಪ್ರಮುಖ ಬಿ.ಅಮೃತ್ ರಾಜ್ ಮಾತನಾಡಿ, ಕೆಲ ಮುಸ್ಲಿಂ ಸಂಘಟನೆಗಳು ಹಿಂದೂ ಹೋರಾಟಗಾರರನ್ನು ಹತ್ಯೆ ಮಾಡುವ ಮುಖಾಂತರ ಹಿಂದುಗಳ ಪರವಾದ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಇಂತಹ ದುಷ್ಟ ಶಕ್ತಿಗಳನ್ನು ಹತ್ತಿಕ್ಕುವ ಪ್ರಾಮಾಣಿಕ ಕೆಲಸವನ್ನು ಸರ್ಕಾರಗಳು ಮಾಡಬೇಕಿದೆ ಎಂದು ತಿಳಿಸಿದರು.

ಹಿಂದೂ ಜಾಗೃತಿ ಸಮಿತಿಯ ಬಿ.ಪಿ. ಶ್ರೀನಾಥ್, ಕೆ.ಎನ್. ದೇವರಾಜ್, ವಿ.ಡಿ. ಪುಂಡರಿಕ್ಷಾಕ, ಎಂ.ಎಂ. ಚರಣ್, ವಿ.ಎನ್. ವಸಂತಕುಮಾರ್, ಪಪಂ ಸದಸ್ಯ ಜಯವರ್ಧನ್, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರಾದ ಕೆ.ಜಿ. ಮನು, ಕೊಡಗನ ಹರ್ಷ, ಮಂಡೇಪಂಡ ಬೋಸ್ ಮೊಣ್ಣಪ್ಪ, ಉಮಾಶಂಕರ್, ಅನೀಶ್, ಭಾಸ್ಕರ್ ನಾಯಕ್ ಮತ್ತಿತರರು ಇದ್ದರು.