ಗೋಣಿಕೊಪ್ಪ ವರದಿ, ಫೆ. 29: ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಭಾಂಗಣದಲ್ಲಿ ‘ಜೆನ್ ಶಿಟಾರಿಯೋ ರ್ಯು’ ಕರಾಟೆ ಸ್ಕೂಲ್ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಜಿಲ್ಲಾಮಟ್ಟದ ಇಂಟರ್ ದೋಜೋ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಗೋಣಿಕೊಪ್ಪ ಕಾಪ್ಸ್ ಶಾಲಾ ತಂಡಕ್ಕೆ 28 ಪದಕ ಲಭಿಸಿವೆ. ತಲಾ 8 ಚಿನ್ನ ಹಾಗೂ ಬೆಳ್ಳಿ, 12 ಕಂಚಿನ ಪದಕ ಗೆದ್ದುಕೊಂಡರು. 18 ಕ್ರೀಡಾಪಟುಗಳಾದ ಶೃದ್ಧಾ, ನೇಹಾ, ಜಾಗೃತಿ, ಕೆ. ಅನಿಕಾ, ಪ್ರಿಯಾಂಕಾ, ಅನಿರುದ್ಧ, ಸಮರ್ಥ್, ಧ್ಯಾನ್, ಸುಷ್ಮಾ, ಕ್ರಿತಿನ್ ಗಣಪತಿ, ಅನಗಾ ಪ್ರವೀಣ್, ಯೋಗದ, ಗೌತಮಿ, ಧನುಷ್, ಸುಶಿಲ್, ವಿಶಾಲ್, ಕನಿಷ್ಕ್, ಆಯುಷ್ ಪದಕ ಗೆದ್ದುಕೊಂಡರು. ಇವರಿಗೆ ಜಮ್ಮಡ ಜಯ ಜೋಯಪ್ಪ ತರಬೇತಿ ನೀಡಿದ್ದಾರೆ. ಪದಕ ವಿತರಣೆ ಸಂದರ್ಭ ಕರಾಟೆ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಅರುಣ್ ಮಾಚಯ್ಯ ಇದ್ದರು.