ಕುಶಾಲನಗರ, ನ. 26: ವಿದ್ಯಾರ್ಥಿಗಳು ಪರಂಪರೆಯ ಜೊತೆಗೆ ವರ್ತಮಾನದ ಸಂಗತಿ ಗಳನ್ನು ಮನನ ಮಾಡಿಕೊಂಡು ಹೊಸ ಆಯಾಮ ಗಳನ್ನು ಸಾಹಿತ್ಯ ದಲ್ಲಿ ತರುವ ಪ್ರಯತ್ನ ಮಾಡಬೇಕು ಎಂದು ಕವಯತ್ರಿ ಸುನೀತಾ ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಚಿಕ್ಕ ಅಳುವಾರದ ಮಂಗಳೂರು ವಿವಿ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ಸಂಯುಕ್ತಾಶ್ರಯದಲ್ಲಿ ನಡೆದ ಜಾಣೆ ಜಾಣೆಯರ ಬಳಗದ ನನ್ನ ಮೆಚ್ಚಿನ ಪುಸ್ತಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ಪ್ರಭಾರ ನಿರ್ದೇಶಕಿ ಪ್ರೊ. ಮಂಜುಳಾ ಶಾಂತರಾಮ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾಲ್ಯದಿಂದಲೇ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಕನ್ನಡ ವಿಭಾಗದ ಉಪನ್ಯಾಸಕರು ಗಳಾದ ಡಾ. ಮಹಂತೇಶ ಪಾಟೀಲ, ಜûಮೀರ್ ಅಹಮದ್, ಕೆ.ಎಸ್. ಶ್ರೀನಿವಾಸ್, ಅರ್ಪಿತಾ ಹಾಗೂ ಸಹಾಯಕ ಗ್ರಂಥಪಾಲಕ ಕೆ.ಜೆ. ಹರೀಶ್ ಮಾತನಾಡಿದರು.
ಜಾಣೆ ಜಾಣೆಯರ ಬಳಗ 2019-20 ನನ್ನ ಮೆಚ್ಚಿನ ಪುಸ್ತಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ರಾಜೇಶ್, ಪದ್ಮಾವತಿ, ಶೃತಿ, ರೇಷ್ಮ, ಮಂಗಳ, ಜೀವಿತಾ, ಗಾನಶ್ರೀ, ಸೌಮ್ಯ, ಪ್ರೀತಿ ತಮ್ಮ ಮೆಚ್ಚಿನ ಪುಸ್ತಕದ ಕುರಿತು ವಿಷಯವನ್ನು ಮಂಡಿಸಿದರು. ನಿರೂಪಣೆಯನ್ನು ವಿದ್ಯಾರ್ಥಿನಿ ಶೋಭಾ ನೆರವೇರಿಸಿದರು.