ಮಡಿಕೇರಿ, ನ. 26: ಇತ್ತೀಚೆಗೆ ಮಂಗಳೂರಿನ ಉಳ್ಳಾಲದ ಭಾರತ್ ಶಾಲೆಯಲ್ಲಿ ನಡೆದ ವಿಭಾಗೀಯ ಮಟ್ಟದ ಹ್ಯಾಂಡ್‍ಬಾಲ್ ಪಂದ್ಯಾಟದಲ್ಲಿ ಮೂರ್ನಾಡು ಮಾರುತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ಕವನ್ ಕಾರ್ಯಪ್ಪ, ಮಹಮ್ಮದ್ ಸ್ವಾಲಿಹ್, ಆರ್ಯನ್ ಮುತ್ತಪ್ಪ, ಲವ, ಚಂದನ್, ಹರ್ಷಿತ್, ಇರ್ಫಾನ್, ನಿಶಾಂತ್ ಜಿಲ್ಲೆಯನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಮಹಮ್ಮದ್ ಸ್ವಾಲಿಹ್ ಬೆಸ್ಟ್ ಆಲ್‍ರೌಂಡರ್ ಪ್ರಶಸ್ತಿಗೆ ಭಾಜನನಾಗಿದ್ದಾನೆ. ಕವನ್ ಕಾರ್ಯಪ್ಪ, ಆರ್ಯನ್, ಮುತ್ತಪ್ಪ, ಲವ, ಚಂದನ್ ಮತ್ತು ಮಹಮ್ದ್ ಸ್ವಾಲಿಹ್ ಕೊಪ್ಪಳದಲ್ಲಿ ನಡೆಯುವ ರಾಜ್ಯಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.