ಮಡಿಕೇರಿ, ನ.15 : ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಬೆಸೂರಿನ ಸುರೇಶ್ ಮರಕಾಲ ಅವರನ್ನು ರೋಟರಿ ಕೊಡ್ಲಿಪೇಟೆ ಹೇಮಾವತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಬಾರಿ ಅತ್ಯುತ್ತಮ ಶಿಕ್ಷಕ ಎಂಬ ರಾಷ್ಟ್ರ ಪ್ರಶಸ್ತಿಗೆ ಭಾಜನರಾದ ಕರ್ನಾಟಕದ ಇಬ್ಬರು ಶಿಕ್ಷಕರಲ್ಲಿ ಕೊಡಗಿನವರಾದ ಬೆಸೂರು ಪ್ರೌಢÀಶಾಲಾ ಶಿಕ್ಷಕ ಸುರೇಶ್ ಮರಕಾಲ ಅವರನ್ನು ಬೆಸೂರು ಶಾಲೆಯಲ್ಲಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸುರೇಶ್ ಮರಕಾಲ, ಶಾಲೆ ಎಂಬದು ದೇವಾಲಯ ಇದ್ದಂತೆ. ಶಿಕ್ಷಕ ಆ ದೇವಾಲಯದಲ್ಲಿ ಅರ್ಚಕನ ಪಾತ್ರ ನಿರ್ವಹಿಸುತ್ತಾನೆ ಎಂದು ವಿಶ್ಲೇಷಿಸಿ ದರಲ್ಲದೇ, ಹೇಗೆ ಎರಡು ಕೈ ಸೇರಿದರೆ ಮಾತ್ರ ಚಪ್ಪಾಳೆ ಯಾಗುತ್ತದೆಯೋ ಹಾಗೆಯೇ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಹಯೋಗ ವಿದ್ದಾಗ ಮಾತ್ರ ಶಾಲೆಯೊಂದು ಪ್ರಗತಿ ಪಥದಲ್ಲಿ ಸಾಗುತ್ತದೆ ಎಂದರು.

ರೋಟರಿ ಕೊಡ್ಲಿಪೇಟೆ ಹೇಮಾವತಿ ಅಧ್ಯಕ್ಷ ಎಚ್.ಜಿ.ಪ್ರವೀಣ್, ಕಾರ್ಯದರ್ಶಿ ಎಚ್.ಎಂ.ದಿವಾಕರ್ ಸನ್ಮಾನ ನೆರವೇರಿಸಿದರು. ಇದೇ ಸಂದರ್ಭ ಶಾಲೆಗೆ ಪ್ರಥಮ ಚಿಕಿತ್ಸಾ ಕಿಟ್ ನೀಡಲಾಯಿತು. ಶಾಲಾ ಸಹ ಶಿಕ್ಷಕ ದಿವಾಕರ್, ತುಳಸಿ ಹಾಜರಿದ್ದರು.