ಮಡಿಕೇರಿ, ಸೆ. 29: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದ ಪ್ರಯುಕ್ತ ತಾ. 30 ರಿಂದ (ಇಂದಿನಿಂದ) ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರಾರಂಭಗೊಳ್ಳಲಿವೆ.
ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು; 80 ಅಡಿ ಉದ್ದ, 60 ಅಡಿ ಅಗಲದ ಭವ್ಯ ವೇದಿಕೆ ಸಜ್ಜಾಗಿದೆ. ಕಲಾಭಿಮಾನಿಗಳು ಸಾಂಸ್ಕøತಿಕ ಕಾರ್ಯಕ್ರಮಗಳ ಸೊಬಗನ್ನು ಸವಿಯಲು ಅನುಕೂಲವಾಗುವಂತೆ 100 ಅಡಿ ಅಗಲ, 400 ಅಡಿ ಉದ್ದದ ಶಾಮಿಯಾನ ವ್ಯವಸ್ಥೆಯೊಂದಿಗೆ 6000 ಆಸನಗಳನ್ನು ಅಳವಡಿಸಲಾಗಿದೆ.
ತಾ. 30 ರಂದು (ಇಂದು) ಸಂಜೆ 6 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಮಡಿಕೇರಿಯ ನಾಟ್ಯನಿಕೇತನ ಸಂಗೀತ ನೃತ್ಯ ಶಾಲೆ ತಂಡದಿಂದ ಗಜಾನನ ನೃತ್ಯ ಮತ್ತು ನೃತ್ಯ ರೂಪಕ, ಮಂಗಳೂರಿನ ಅಮೇಜಿಂಗ್ ಡ್ಯಾನ್ಸ್ ಕಂಪನಿ (ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನ ಫೈನಲಿಸ್ಟ್) ತಂಡದಿಂದ ಡ್ಯಾನ್ಸ್ ಶೋ, ವೀರಾಜಪೇಟೆ ಜಗÀನ್ಮೋಹನ ನಾಟ್ಯಾಲಯ ತಂಡದಿಂದ ಶಾಸ್ತ್ರೀಯ ನೃತ್ಯ, ಮೈಸೂರಿನ ಬದ್ರಿ ದಿವ್ಯಭೂಷನ್ ತಂಡದಿಂದ ನಿಯೋ ಭರತನಾಟ್ಯ, ಮಡಿಕೇರಿಯ ತನುಶ್ರೀ ತಂಡದಿಂದ ನೃತ್ಯ ಪ್ರದರ್ಶನ ಮೂಡಿಬರಲಿದೆ.