ಸಿದ್ದಾಪುರ, ಸೆ. 28: ಅನಾರೋಗ್ಯದಿಂದ ಬಳಲುತ್ತಿದ್ದ ಮೂವರಿಗೆ ಚಿಕಿತ್ಸೆಗೆ ನೆರವು ನೀಡುವ ಮೂಲಕ ಕೆ.ಬಿ.ಬಿ. ಚಾರಿಟೇಬಲ್ ಟ್ರಸ್ಟ್ ನೆರವು ನೀಡಿದೆ. ಅನಾರೋಗ್ಯ ಕ್ಕೊಳಗಾಗಿ ಚಿಕಿತ್ಸೆ ಪಡೆದು ಕೊಳ್ಳಲು ಸಾಧ್ಯವಾಗದೆ ಸಂಕಷ್ಟಕ್ಕೊಳಗಾಗಿದ್ದ ವೀರಾಜಪೇಟೆಯ ಫೈರೋಜ್, ಕಾಟ್ರಕೊಲ್ಲಿ ಗ್ರಾಮದ ಬೇಬಿ, ಹೊಸೂರು ಗ್ರಾಮದ ಅಬೂಬಕ್ಕರ್ ಎಂಬವರಿಗೆ ತಲಾ ರೂ. 5 ಸಾವಿರ ಚಿಕಿತ್ಸೆಗೆ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ. ಕೆ.ಬಿ.ಬಿ. ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ.ಹೆಚ್. ಮೊಹಮ್ಮದ್ ಟ್ರಸ್ಟ್‍ನ ಕಚೇರಿಯಲ್ಲಿ ಚೆಕ್ ವಿತರಣೆ ಮಾಡಿದರು. ಈ ಸಂದರ್ಭ ಕೆ.ಬಿ.ಬಿ. ಚಾರಿಟೇಬಲ್ ಟ್ರಸ್ಟ್ ನ ಪ್ರಮುಖರಾದ ಮಜೀದ್ ಚೊಕ್ಕಂಡಹಳ್ಳಿ, ಫತಾಹ್ ಕಡಂಗ, ನೌಷಾದ್ ಜನ್ನತ್, ಶಫೀಕ್ ಗುಂಡಿಗೆರೆ, ರಫೀಕ್ ವೀರಾಜಪೇಟೆ, ಅಶ್ರಫ್ ಗೋಣಿಕೊಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.