ಶನಿವಾರಸಂತೆ, ಸೆ. 27: ಸಂಘದ ಆಡಳಿತ ಮಂಡಳಿಯ ಪದಾಧಿಕಾರಿಗಳೊಂದಿಗೆ ಸರ್ವ ಸದಸ್ಯರು ಸಹಕಾರ ನೀಡಿದರೆ ಸಂಘ ಸರ್ವತೋಮುಖ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಮಹಿಳಾ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷೆ ಭುವನೇಶ್ವರಿ ಹರೀಶ್ ಹೇಳಿದರು.

ಪಟ್ಟಣದ ಮಹಿಳಾ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ಈ ಪ್ರಯುಕ್ತ ಸಂಘದ ಸದಸ್ಯೆಯರಿಗೆ ಛದ್ಮವೇಷ, ಆಶುಭಾಷಣ, ಮೂಕಾಭಿನಯ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ವಿಜೇತರಿಗೆ ಹಾಗೂ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಸಂಘದ ಉಪಾಧ್ಯಕ್ಷೆ ರೇಖಾ, ಕಾರ್ಯದರ್ಶಿ ಗೀತಾ, ನಿರ್ದೇಶಕರಾದ ಹೆಚ್.ಎಸ್. ಸೌಭಾಗ್ಯಲಕ್ಷ್ಮೀ, ಅನಿತಾ, ವಾಣಿ, ಶೋಭಾ, ಉಷಾ, ಸುಮಿತ್ರಾ, ಸ್ವಾತಿ, ಶೀಲಾ ಹಾಗೂ ಶಿಕ್ಷಕಿ ಶೋಭಾ ಉಪಸ್ಥಿತರಿದ್ದರು.