ಮಡಿಕೇರಿ, ಸೆ. 28: ಮೂಲತಃ ಅರಪಟ್ಟು ಗ್ರಾಮದ ನಿವಾಸಿ ಚೆನ್ನೈಯಲ್ಲಿ ಉದ್ಯೋಗದಲ್ಲಿರುವ ಪಾಂಡಂಡ ವಿಶ್ವನಾಥ್ ಉತ್ತಪ್ಪ ಅವರಿಗೆ ಪ್ರತಿಷ್ಠಿತ ಟೈಮ್ಸ್ ಬಿಸ್‍ನೆಸ್ ಅವಾರ್ಡ್ ಲಭ್ಯವಾಗಿದೆ.

ಚೆನ್ನೈನಲ್ಲಿ ಉತ್ಕøಷ್ಟ ದರ್ಜೆಯ ಸಮಾವೇಶ ಭವನವನ್ನು ತನ್ನ ಸಂಬಂಧಿ ಕಾರ್ತಿಕ್ ಜೊತೆಗೂಡಿ ಯೋಜಿಸಿ, ನಕ್ಷೆ ತಯಾರಿಸಿ ಪರಿಕಲ್ಪನೆ ಮಾಡಿದ್ದ ಕೀರ್ತಿಗೆ ಭಾಜನರಾಗಿದ್ದರು. ಇವರ ಕೆಲಸವನ್ನು ಪರಿಗಣಿಸಿ ಟೈಮ್ಸ್ ಸಂಸ್ಥೆ ಬಿಸ್‍ನೆಸ್ ಅವಾರ್ಡ್ ನೀಡಿದೆ. ಇವರು ಮಾಡೆಲಿಂಗ್ ಜೊತೆ ನಟರಾಗಿಯೂ ಪ್ರಶಸ್ತಿಗಳನ್ನು ಪಡೆದಿದ್ದಾರೆ.